

ಬೋರಗಾಂವ: ಸಮೀಪದ ಜನವಾಡ ಗ್ರಾಪಂಗೆ ಶುಕ್ರವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯರಾಗಿ ಸನಾತನ ಮಗದುಮ ಹಾಗೂ ಉಪಾಧ್ಯರಾಗಿ ಮಲ್ಲವ್ವ ಪೂಜಾರಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಉಮೇಶ ಸೀಗೆಹಳ್ಳಿ ೂಷಿಸಿದರು. ಕಾಶಿಬಾಯಿ ಚೌಗುಲೆ ಮತ್ತು ಸುರೇಖಾ ಕೋರೆ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಅವಿರೋಧ ಆಯ್ಕೆ ಜರುಗಿತು.
ಗ್ರಾಪಂ ಸದಸ್ಯ ಉದಯಕುಮಾರ ಪಾಟೀಲ ಮಾತನಾಡಿ, ಗ್ರಾಮದ ಸರ್ವಾಂಗೀಣ ಅಭಿವದ್ಧಿಗೆ ಕಳೆದ ಐದು ವರ್ಷಗಳಿಂದ ಎಲ್ಲ ಚುನಾವಣೆಗಳನ್ನು ಅವಿರೋಧವಾಗಿ ಮಾಡಿದ್ದೇವೆ. ಅವಿರೋಧವಾಗಿ ಚುನಾವಣೆ ನಡೆಸಿದ್ದರಿಂದ ಗ್ರಾಮದ ಸರ್ವಾಂಗೀಣ ಅಭಿವದ್ಧಿಯಾಗುತ್ತಿದೆ ಎಂದರು.
ನೂತನ ಅಧ್ಯ ಸನಾತನ ಮಗದುಮ ಮಾತನಾಡಿ, ಗ್ರಾಮದ ಸಮಗ್ರ ಅಭಿವದ್ಧಿಗೆ ಶ್ರಮಿಸಲಾಗುವುದು ಎಂದರು.
ನೂತನ ಉಪಾಧ್ಯೆ ಮಲ್ಲವ್ವ ಪೂಜಾರಿ, ಸದಸ್ಯರಾದ ಜ್ಯೋತಿಬಾ ಮೊಕಾಶಿ, ಉದಯಕುಮಾರ ಪಾಟೀಲ, ಕುಮಾರ ಮುಧಾಳೆ, ಅಣ್ಣಾಸೋ ಪಾಟೀಲ, ಕಾಶಿಬಾಯಿ ಚೌಗುಲೆ, ಚಕೂಲಿ ಕಾಂಬಳೆ, ಧನಶ್ರೀ ವಂಜಾರೆ, ಸುರೇಖಾ ಕೋರೆ, ಸುಭ್ರಾವ ಪಾಟೀಲ, ನಂದಕುಮಾರ ಜಂಗಡೆ, ಡಾ.ರಮೇಶ ಚೌಗುಲೆ, ರಾಹುಲ ಘಾಟಗೆ, ದಯಾನಂದ ಚಿಖಲೆ, ಶಶಿಕಾಂತ ಮಗದುಮ್, ಬಾಬು ಮಗದುಮ್, ದತ್ತಾ ಮೊಕಾಶಿ, ವರುಣ ಮಗದುಮ, ಮಕರಧ್ವಜ ಮಗದುಮ, ಸಾಗರ ಕೆರೂರೆ, ಪಿಡಿಒ ಶಿವಾನಂದ, ಗ್ರಾಮ ಆಡಳಿತ ಅಧಿಕಾರಿ ಪಿ.ಬಿ.ಕಲಗಿ ಉಪಸ್ಥಿತರಿದ್ದರು.