ಒಳಿತು ಬಯಸಲಿದೆ ಸನಾತನ ಧರ್ಮ

Yaga Shale
ಶ್ರೀ ಮಾರುತಿ ಸಚ್ಚಿದಾನಂದ ಆಶ್ರಮದ ಬಳಿ ನಿರ್ಮಿಸಿರುವ ಹೈಮಾಸ್ಟ್ ದೀಪ ಉದ್ಘಾಟಿಸಲಾಯಿತು. ಆವರಣದಲ್ಲಿ ಅವಧೂತ ಶ್ರೀ ಸತೀಶ್ ಶರ್ಮಜಿ, ಹರೀಶ್, ಕಾಳೇಗೌಡ, ಸಿದ್ದೇಗೌಡ, ಪುರುಷೋತ್ತಮ ರಾಮಚಂದ್ರ, ರಮೇಶ್, ಲವಕುಶ, ಆದಿತ್ಯ ಇದ್ದರು.
Published on

 ಅರಸೀಕೆರೆ ಗ್ರಾಮಾಂತರ: ಸನಾತನ ಧರ್ಮದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯ ವಿಶ್ವದ ಶಾಂತಿ ಮತ್ತು ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತವೆ. ವಿಶ್ವವವನ್ನೇ ಒಂದು ಕುಟುಂಬ ಎಂದು ಪರಿಗಣಿಸಿ ಒಳಿತನ್ನೇ ಬಯಸುವ ಸಂಸ್ಕೃತಿ, ಸಂಸ್ಕಾರ ನಮ್ಮದಾಗಿದೆ ಎಂದು ಶ್ರೀ ಮಾರುತಿ ಸಚ್ಚಿದಾನಂದ ಆಶ್ರಮದ ಶ್ರೀ ಸತೀಶ್ ಶರ್ಮಾಜಿ ನುಡಿದರು.

ನಗರದ ಶ್ರೀವಿದ್ಯಾನಗರದಲ್ಲಿರುವ ಶ್ರೀಕ್ಷೇತ್ರ ಲಕ್ಷ್ಮೀನರಸಿಂಹ ದೇವಾಲಯದ ಯಾಗ ಶಾಲೆಯಲ್ಲಿ ಭಾನುವಾರ ಲೋಕ ಕಲ್ಯಾಣಾರ್ಥವಾಗಿ ಆಯೋಜಿಸಿದ್ದ ಹೋಮ-ಹವನ ಪೂಜಾ ಕೈಂಕರ್ಯದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಭಾರತದಲ್ಲಿ ಒಂದೇ ಸ್ಥಳದ ಮೂಲಕ ಶ್ರೀ ಲಕ್ಷ್ಮೀನರಸಿಂಹ, ಶ್ರೀ ಪಂಚಮುಖಿ ಗಣಪತಿ, ಶ್ರೀ ಸೂರ್ಯನಾರಾಯಣ, ಶ್ರೀ ಅಂಬಿಕಾದೇವಿ, ಶ್ರೀ ಈಶ್ವರ ಮತ್ತು ಶ್ರೀ ಪಂಚಮುಖಿ ಆಂಜನೇಯ ದೇವಾಲಯ ಇರುವ ಕ್ಷೇತ್ರ ಇದಾಗಿದೆ. ಪ್ರತಿ ತಿಂಗಳು ಹುಣ್ಣಿಮೆಯಂದು ಲೋಕ ಕಲ್ಯಾಣಾರ್ಥವಾಗಿ ಪ್ರಾತಃಕಾಲದಿಂದಲೇ ವಿಶೇಷ ಪೂಜಾ ಕೈಂಕರ್ಯ ನಡೆಸಲಾಗುತ್ತದೆ. ಪ್ರತಿ ತಿಂಗಳು ಹುಣ್ಣಿಮೆಯಂದು ಶಕ್ತಿದೇವತೆಗಳಿಗೆ ಪೂಜೆ ಸಲ್ಲಿಸಲಾಗುತ್ತದೆ ಎಂದರು.

ಇದೇ ವೇಳೆ ಶ್ರೀಕ್ಷೇತ್ರ ಸಮೀಪ ನಗರಸಭೆ ನಿಧಿಯಿಂದ ಸುಮಾರು 3.70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಹೈಮಾಸ್ಟ್ ದೀಪಗಳನ್ನು 3ನೇ ವಾರ್ಡ್ ನಗರಸಭೆ ಸದಸ್ಯೆ ಮಧುರ ಹರೀಶ್ ಉದ್ಘಾಟಿಸಿದರು.

ಅರ್ಚಕರಾದ ಆದಿತ್ಯ ಕಣಕಟ್ಟೆ, ಉತ್ತರ ಪ್ರದೇಶದ ಚಿತ್ರಕೂಟ ಲವಕುಶ ಪಂಡಿತ್ ಮತ್ತು ತಂಡದವರು ವಿಶೇಷ ಪೂಜಾ ಕೈಂಕರ್ಯ ನಡೆಸಿಕೊಟ್ಟರು. ಶ್ರೀ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಕಾಳೇಗೌಡ, ಸಿದ್ದೇಗೌಡ, ಪುರುಷೋತ್ತಮ, ರಾಮಚಂದ್ರು, ನಗರಸಭೆ ಕಿರಿಯ ಇಂಜಿನಿಯರ್ ರಮೇಶ್, ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net