ಸನಾತನ ಧರ್ಮ ರಕ್ಷಣೆ ಕಾರ್ಯ

shankara
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಸಮಾಜವು ಒಗ್ಗಟ್ಟಿನಿಂದ ಸಂಘಟಿತವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಶ್ರೀ ಮೂಕಾಂಬಿಕಾ ಡಿವೂಟೀಸ್ ಟ್ರಸ್ಟ್(ಕೇರಳ) ಸನಾತನ ಧರ್ಮ ರಕ್ಷಣೆ ಮೂಲಕ ಸ್ವಾಭಿಮಾನಿಯಾಗಿ ಬೆಳೆಯಬೇಕೆನ್ನುವ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ವಕೀಲ ಪ್ರಶಾಂತ್ ಹೇಳಿದರು.

ಕೊಲ್ಲೂರು ದೇವಳದ ಸ್ವರ್ಣಮುಖಿ ವೇದಿಕೆಯಲ್ಲಿ ಗುರುವಾರ ಸಂಜೆ ಶ್ರೀ ಮೂಕಾಂಬಿಕಾ ಡಿವೊಟೀಸ್ ಟ್ರಸ್ಟ್ ವತಿಯಿಂದ ನಾಲ್ಕು ದಿನಗಳ ಕಾಲ ಆಯೋಜಿಸಿದ ಮೂರನೇ ವರ್ಷದ ಶ್ರೀ ಶಂಕರ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇರಳದ ನಾಲ್ವರು ಮೂಕಾಂಬಿಕಾ ಭಕ್ತರು ಸೇರಿ 2022ರಲ್ಲಿ ಆರಂಭಿಸಿದ ಈ ಸಂಸ್ಥೆಯಲ್ಲಿ ಪ್ರಸ್ತುತ 400ಕ್ಕೂ ಅಧಿಕ ಭಕ್ತರು ಸೇರ್ಪಡೆಗೊಂಡಿದ್ದಾರೆ. ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕವಾಗಿ ಟ್ರಸ್ಟ್ ಕಾರ್ಯ ನಿರ್ವಹಿಸುತ್ತಿದೆ. ಪ್ರತೀ ವರ್ಷ ವಿದ್ಯಾನಿಧಿ ಯೋಜನೆ ಮೂಲಕ 5 ಮಕ್ಕಳನ್ನು ದತ್ತು ಪಡೆದು ಅವರಿಗೆ ಶಿಕ್ಷಣ ನೀಡುವುದು, ಬಡ ಕುಟುಂಬಗಳಿಗೆ ವಸತಿ, ವಸ್ತ್ರ, ದಿನಸಿಗಳನ್ನು ವಿತರಿಸುವುದು ಇತ್ಯಾದಿ ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು. ಗುರುವಾಯೂರಪ್ಪ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಡಾ.ಲಕ್ಷ್ಮೀ ಶಂಕರ್, ಕ್ಲಾಸಿಕಲ್ ನೃತ್ಯ ಹಾಗೂ ಚಲನಚಿತ್ರ ಕಲಾವಿದೆ ಮೇಥಿಲ್ ದೇವಿಕಾ, ಟ್ರಸ್ಟ್ ಕಾರ್ಯದರ್ಶಿ ಶೀಮಾ ಶಶಿಧರನ್, ಕೊಲ್ಲೂರು ದೇವಳ ಅರ್ಚಕರಾದ ಡಾ.ಕೆ.ಎನ್.ನರಸಿಂಹ ಅಡಿಗ, ಕೆ.ಎನ್.ಸುಬ್ರಹ್ಮಣ್ಯ ಅಡಿಗ, ವ್ಯವಸ್ಥಾಪನಾ ಸಮಿತಿ ಸದಸ್ಯ ಅಭಿಲಾಷ್ ಪಿ.ವಿ., ಎಎಸ್‌ಐ ಅಣ್ಣಪ್ಪ ನಾಯ್ಕ ಉಪಸ್ಥಿತರಿದ್ದರು.

ಮೂಕಾಂಬಿಕಾ ಪರಿಸರ ಸಂರಕ್ಷಣಾ ಸಮಿತಿ ಸಹಯೋಗದಲ್ಲಿ ಸ್ವಚ್ಛ, ಸುರಕ್ಷಾ ಕೊಲ್ಲೂರು ಮತ್ತು ಕೊಡಚಾದ್ರಿ ಅಭಿಯಾನ ಆರಂಭಿಸಲಾಗುತ್ತಿದೆ. ಕ್ಷೇತ್ರದ ಭದ್ರತಾ ನೆಲೆಯಲ್ಲಿ ಸಿಸಿ ಕ್ಯಾಮರಾ, ಅಗತ್ಯ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗುತಿತದೆ. ಹಾಲ್ಕಲ್‌ನಿಂದ ಕೊಲ್ಲೂರು ತನಕ ಸ್ವಚ್ಛತಾ ಬ್ಯಾನರ್ ಹಾಕುವ ಮೂಲಕ ಪ್ರವಾಸಿಗರಿಗೆ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. -ವಕೀಲ ಪ್ರಶಾಂತ್, ಟ್ರಸ್ಟ್ ಅಧ್ಯಕ್ಷ https://www.vijayavani.net/reservation-for-the-advancement-of-sc-community https://www.vijayavani.net/kudali-puja-for-the-roads-of-kaup-constituency

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net