

ಚಿತ್ರದುರ್ಗ: ಜಿಲ್ಲೆಯ ಪೊಲೀಸರಿಗೆ ಅಗತ್ಯವಿರುವ ಹೆಚ್ಚುವರಿ ವಾಹನಗಳನ್ನು ರಾಜ್ಯಸರ್ಕಾರಕ್ಕೆ ಮನವಿ ಮಾಡುವುದಾಗಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಶಾಸಕರ ಅನುದಾನದಲ್ಲಿ 26 ಲಕ್ಷ ರೂ.ವೆಚ್ಚದಲ್ಲಿ ಖರೀ ದಿಸಿರುವ ಎರಡು ಮೋಟಾರು ವಾಹನಗಳನ್ನು ಇಲಾಖೆಗೆ ಹಸ್ತಾಂತರಿಸಿ ಮಾತನಾಡಿ,ಹಗಲು-ರಾತ್ರಿ ಎಂಬುದನ್ನು ಲೆಕ್ಕಿಸದೇ ಜನರ ರಕ್ಷ ಣೆಗೆ ನಿರಂತರ ಸೇವೆ ಸಲ್ಲಿಸುವ ಪೊಲೀಸ್ ಅಧಿಕಾರಿ,ಸಿಬ್ಬಂದಿಗೆ ವಾಹನಗಳ ಕೊರತೆ ಇರಬಾರದು.
ಜಿಲ್ಲಾ ಕೇಂದ್ರ ಚಿತ್ರದುರ್ಗದಲ್ಲಿ ಹೆಚ್ಚಿನ ಅಧಿಕಾರಿ-ಸಿಬ್ಬಂದಿ ಇದ್ದು,ಅನೇಕ ವಾಹನಗಳು ಹಳೆಯದಾಗಿವೆ. ನಗರಕ್ಕೆ ಇನ್ನೂ ಹೆಚ್ಚಿನ ವಾಹನಗಳ ಅಗತ್ಯವಿದೆ. ಅಗತ್ಯ ವಾಹನಗಳ ಖರೀದಿಗೆ ಅನುದಾನ ಬಿಡುಗಡೆಗೆ ಎಸ್ಪಿ ಮನವಿ ಮಾಡಿದ್ದರು. ಅವರ ಕೋರಿಕೆಗೆ ಸ್ಪಂದಿಸಿ ಅನುದಾನ ಮಂಜೂರು ಮಾಡಿದ್ದೇನೆ.
ನಗರ ಮತ್ತು ಜಿಲ್ಲೆಗೆ 50 ವಾಹನಗಳ ಅಗತ್ಯವಿದೆ ಎಂದು ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ದ್ದು,ಮಂಜೂರು ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಗೆ ಹಣದ ಕೊರತೆ ಇದೆ ಎಂದು ಎಸ್ಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಪ್ರಸ್ತಾಪಿಸಿದ್ದನ್ನು ಗಮನದಲ್ಲಿ ಇಟ್ಟುಕೊಂಡು ಪ್ರಾಧಿಕಾರ,ಸಿಗ್ನಲ್ ವ್ಯವಸ್ಥೆಗೆ 1.50 ಕೋಟಿ ರೂ.ಮೀಸಲಿಟ್ಟಿದೆ. ನಗರ ಮತ್ತು ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು,ಸಾವು-ನೋವಿನ ಸಂಖ್ಯೆಯೂ ಅಧಿಕವಾಗಿದೆ.
ಅಪಘಾತ ತಡೆಗೆ ಪೊಲೀಸರು ಸೂಕ್ತ ಕ್ರಮ ವಹಿಸಬೇಕು. ವಾಹನ ಚಾಲಕರು ಸಂಚಾರಿ ನಿಯಮಗಳನ್ನು ತಪ್ಪದೆ ಪಾಲಿಸ ಬೇಕು. ನಗ ರದಲ್ಲಿ ವಾಹನ ದಟ್ಟಣೆ ಅಧಿಕವಾಗುತ್ತಿದ್ದು,ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳುತ್ತಿದ್ದಂತೆ ಟ್ರಾಫಿಕ್ ವ್ಯವಸ್ಥೆಯನ್ನು ಸರಿಪಡಿಸು ವಂತೆ ಎಸ್ಪಿ ಅವರಿಗೆ ಸೂಚಿಸಿರುವುದಾಗಿ ತಿಳಿಸಿದರು. ರಸ್ತೆ ಅಗಲೀಕರಣ ಸಂದರ್ಭದಲ್ಲಿ ತೆರವುಗೊಳಿಸಿದ್ದ ಡಿಪಿಒ ಕಾಪೌಂಡ್‌ನ್ನು ನಗರಸಭೆ ಅನುದಾನದೊಂದಿಗೆ ಹೊಸದಾಗಿ ನಿರ್ಮಿಸಲಾಗುತ್ತಿದೆ ಎಂದರು.
ಎಸ್ಪಿ ಕೆ.ಪರಶುರಾಮ್,ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ,ಡಿವೈಎಸ್ಪಿ ಅನಿಲ್‌ಕುಮಾರ್,ಡಿಎಆರ್ ಡಿವೈಎಸ್ಪಿ ತಿಪ್ಪೇಸ್ವಾಮಿ,ಪಿಐಗಳಾದ ಬಾಲಚಂದ್ರನಾಯಕ್,ಎಂಟಿಒ ರುದ್ರೇಶ್,ತಿಪ್ಪೇಸ್ವಾಮಿ,ರಮೇಶ್‌ರಾವ್,ರಮಾಕಾಂತ್,ಸೈಯದಾ ತಸ್ಲಿಮಾ ಫಾತಿಮಾ,ಪಿಎಸ್‌ಐಗಳಾದ ಗೀತಮ್ಮ,ಯಶೋಧಮ್ಮ,ಸಂಚಾರಿ ಠಾಣೆ ಪಿಎಸ್‌ಐ ರಘು ಮತ್ತಿತರ ಅಧಿಕಾರಿ,ಸಿಬ್ಬಂದಿ ಇದ್ದರು.