ಸಂವಿಧಾನವೇ ಬದುಕಿನ ಅವಿಭಾಜ್ಯ ಅಂಗ

samvidhana
Published on

ಮಡಿಕೇರಿ:

ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವೇ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಅದನ್ನು ಪಾಲಿಸಲು ಎಲ್ಲರೂ ಬದ್ಧರಾಗಿರಬೇಕು ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ಮಡಿಕೇರಿಯ ಗುರುವಾರ ಪ್ರೊಟೆಸ್ಟೆಂಟ್ ಸಭೆಗಳ ಸಂಘ ಏರ್ಪಡಿಸಿದ್ದ ಮೂರು ದಿನದ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ನಮ್ಮ ಸಂವಿಧಾನ ಸಮಾನತೆಯನ್ನು ಸರ್ವರಿಗೂ ನೀಡಿದ್ದು ಎಲ್ಲಾ ಧರ್ಮ, ಜಾತಿ, ಪಂಗಡದ ಜನರು ತಮ್ಮ ಧಾರ್ಮಿಕ ಆಚರಣೆಗಳು, ಪರಂಪರೆಗಳು, ಪದ್ದತಿಗಳನ್ನು ಶಾಂತಿಯುತವಾಗಿ ಆಚರಿಸುವ ಅಧಿಕಾರ ನೀಡಿದೆ. ಅದನ್ನು ಪಾಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ತಾವು ಒಬ್ಬ ಕಾನೂನಿನ ವಿಧ್ಯಾರ್ಥಿಯಾಗಿ, ವಕೀಲನಾಗಿ ಶಾಸಕಾಂಗದ ಪ್ರತಿನಿಧಿಯಾಗಿ ಕೊನೆಯವರೆಗೂ ಸಂವಿಧಾನದ ಆಶಯಗಳಿಗೆ ಬದ್ಧನಾಗಿರುತ್ತೇನೆ ಎಂದರು.

ಏಳು ಪ್ರಕಾಶಿಸು ಎಂಬ ಶೀರ್ಷಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಕುಮಾರ್ ಮಹಾದೇವ್, ಮುಖ್ಯ ಭೋಧಕ ಡಾ. ರೆವರೆಂಡ್ ರವಿಮಣಿ, ರಾಜೇಶ್, ಫಿಲೋಮಿನ ರಾಜ್, ಬೆನೆಡಿಕ್ಟ್, ಸುನೀಲ್, ಅರ್. ನವೀನ್, ಸ್ಟೆನ್ಸನ್, ಟೈಟಸ್, ಸಿದ್ದು, ಪಾಕಾ, ಬ್ರದರ್ ಎಡ್ವಿನ್ ಸೇರಿದಂತೆ ಜಿಲ್ಲೆಯ ಎಲ್ಲಾ ಭಾಗಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net