ಮುಂದಿನ ತಿಂಗಳು ಕುಶಾಲನಗರದಲ್ಲಿ ಯುಜಿಡಿ ಕಾರ್ಯಾರಂಭ

samvada
Published on

ಕುಶಾಲನಗರ:

ಕುಶಾಲನಗರದ ಬಹುನಿರೀಕ್ಷಿತ ಒಳಚರಂಡಿ ಯೋಜನೆಗೆ ಮುಂದಿನ ತಿಂಗಳು ಚಾಲನೆ ನೀಡಲಾಗುವುದು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ. ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಮಂಗವಾರ ಸಂಜೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುಜಿಡಿ ಯೋಜನೆಯ ಚಾಲನೆ ಈಗ ಪ್ರಾಯೋಗಿಕವಾಗಿ ನಡೆದಿದೆ. ಯುಜಿಡಿ ಕಾರ್ಯನಿರ್ವಹಣೆಗೆ ಸೂಕ್ತ ಯಂತ್ರೋಪಕರಣಗಳು ಬೇಕು. ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ತಿಂಗಳಲ್ಲಿ ಕೊಡಗಿನ ಪ್ರಥಮ ಒಳಚರಂಡಿ ಯೋಜನೆಗೆ ಕುಶಾಲನಗರದಲ್ಲಿ ನಗರಾಭಿವೃದ್ಧಿ ಸಚಿವರು ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಳೆದ ಬೇಸಿಗೆಯಲ್ಲಿ ಕುಶಾಲನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕುಡಿಯುವ ನೀರಿಗೆ ಭಾರಿ ಸಮಸ್ಯೆ ಆಗಿತ್ತು. ಈ ಹಿನ್ನೆಲೆಯಲ್ಲಿ ಪುರಸಭೆ ವ್ಯಾಪ್ತಿಗೆ ಸರ್ವಋತು ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದ್ದು, ಅಮೃತ್ 2 ಯೋಜನೆ ಆಡಿಯಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಕ್ಕೆ ಬರಲಿದೆ. ಈ ಸಂಬAಧ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ. ಕೂಡಿಗೆ ಬಳಿ ಹಾರಂಗಿ ಮತ್ತು ಕಾವೇರಿ ನದಿ ಸಂಗಮ ಸ್ಥಳದಿಂದ ಕುಶಾಲನಗರಕ್ಕೆ ನೀರಿನ ಪೂರೈಕೆ ಆಗಲಿದೆ.

ಕುಶಾಲನಗರ ಪುರಸಭೆ ಆಡಳಿತ ಭವನ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಉದ್ಘಾಟಿಸಲಾಗಿದೆ. ಹಾಗಾಗಿ ಕಾಮಗಾರಿ ಸ್ಥಗಿತ ಆಗಿತ್ತು. ಇದೀಗ ಸರ್ಕಾರದಿಂದ ಸೂಕ್ತ ಅನುದಾನ ಮಂಜೂರಾಗಿದ್ದು ಮುಂದಿನ ಮಳೆಗಾಲ ಮುಗಿಯುವುದರ ಒಳಗೆ 2 ಕೋಟಿ ರೂ. ಹೆಚ್ಚುವರಿ ವೆಚ್ಚದಲ್ಲಿ ಪೂರ್ಣಗೊಳ್ಳಲಿದೆ. ಕುಶಾಲನಗರ ಪಟ್ಟಣದ ಕಲಾಭವನ ಕಾಮಗಾರಿ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿ ಪೂರ್ಣಗೊಳ್ಳಲಿದ್ದು, 5-6 ತಿಂಗಳಲ್ಲಿ ಸೇವೆಗೆ ಲಭ್ಯ ಆಗಲಿದೆ. ಇದರಿಂದ ಖಾಸಗಿ ಮತ್ತು ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲ ಆಗಲಿದೆ.

ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವ ಸಂಬAಧ ಆರೋಗ್ಯ ಸಚಿವರ ಜತೆ ಮಾತುಕತೆನಡೆಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ತಾಲೂಕು ಆಸ್ಪತ್ರೆಗೆ ಅನುದಾನ ಸಿಗುವ ಭರವಸೆ ಇದೆ. ಇಲ್ಲಿ ಲಯನ್ಸ್ ಸಂಸ್ಥೆಯಿAದ ಸಾರ್ವಜನಿಕರಿಗೆ ಅನಾನೂಕೂಲ ಆಗಬಾರದು. ಆಸ್ಪತ್ರೆಗೆ ಜಾಗ ಕೊಡುವ ಮಾನವೀಯತೆ ತೋರಿಸಬೇಕು.

ಮಡಿಕೇರಿಯಲ್ಲಿ ಜಿಲ್ಲಾಸ್ಪತ್ರೆಗೆ ಹೃದ್ರೋಗ ಘಟಕ ಮಂಜೂರಾಗಿದೆ. ಅಲ್ಲೇ ಈ ಘಟಕ ಆದಷ್ಟು ಶೀಘ್ರ ಪ್ರಾರಂಭ ಆಗಲಿದೆ. ಮಡಿಕೇರಿಯಲ್ಲಿ ಎಂಆರ್‌ಐ ಘಟಕ ಇದ್ದು, ಅದರ ಉಪಯೋಗ ಆಗಬೇಕು. ಈ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಸಿಗುವಂತಾಗಲು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಾಹಿತಿ ಫಲಕ ಅಳವಡಿಸಲಾಗುವುದು. ಜಿಲ್ಲೆಯಲ್ಲಿ ವೈದ್ಯರು ಖಾಸಗಿ ಲ್ಯಾಬ್‌ಗಳಿಗೆ ಎಂಆರ್‌ಐ ಸ್ಕಾö್ಯನಿಂಗ್ ಬರೆದು ಕೊಟ್ಟರೆ ಸಾರ್ವಜನಿಕರು ತಮ್ಮ ಗಮನಕ್ಕೆ ತರಬೇಕು. ಕುಶಾಲನಗರದಲ್ಲಿ ಡಯಾಲಿಸಿಸ್ ಘಟಕ ಕಾರ್ಯ ನಿರ್ವಹಿಸಿಸುತ್ತಿದ್ದು, ಸ್ಥಳೀಯ ರೋಗಿಗಳಿಗೆ ಅನುಕೂಲ ಆಗಿದೆ.

ಕುಶಾಲನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕೇಂದ್ರ ಸ್ಥಳದಲ್ಲಿದ್ದು, ಮೇಲ್ದರ್ಜೆಗೆ ಏರಿಸುವ ಚಿಂತನೆ ನಡೆಸಲಾಗಿದೆ. ವಿಷಯವನ್ನು ಸಾರಿಗೆ ಮಂತ್ರಿ ಗಮನಕ್ಕೂ ತರಲಾಗಿದೆ. ಹಾಗಾಗಿ ಮುಂದಿನ ಬಜೆಟ್‌ನಲ್ಲಿ ಈ ಸಂಬAಧ ಅನುದಾನ ಸಿಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಕೊಡಗಿಗೆ ಈಗಾಗಲೇ 5 ಅಶ್ವಮೇಧ ಬಸ್‌ಗಳು ಬಂದಿದ್ದು, ಇದೇ ಮೊದಲ ಬಾರಿಗೆ ಮಡಿಕೇರಿ ಆರ್‌ಟಿಒ ನಂಬರ್‌ನಲ್ಲಿ ಸಂಚರಿಸುತ್ತಿವೆ. ಮಡಿಕೇರಿ ಡಿಪೋಕ್ಕೆ ಇನ್ನೂ 25 ಅಶ್ವಮೇಧ ಬಸ್‌ಗಳಿಗಾಗಿ ಬೇಡಿಕೆ ಇಡಲಾಗಿದ್ದು, ಶೀಘ್ರ ಅದು ಈಡೇರುವ ನಿರೀಕ್ಷೆ ಇದೆ. ಕುಶಾಲನಗರ ಬಸ್ ನಿಲ್ದಾಣ ಎದುರು ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿ ಮುಗಿದಿದೆ. ಇನ್ನು 15-20 ದಿನದಲ್ಲಿ ಉದ್ಘಾಟನೆ ಆಗಲಿದೆ ಎಂದು ಮಾಹಿತಿ ನೀಡಿದರು.

ಇದಕ್ಕೂ ಮೊದಲು ಮಾತನಾಡಿದ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಎಸ್. ನಾಗೇಶ್, ಕುಶಾಲನಗರ ಸರ್ವಾಂಗೀಣ ಅಭಿವೃದ್ಧಿ ಮತ್ತು ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಕನಸು ನನಸು ಮಾಡಲು ಚರ್ಚಿಸುವ ಸಲುವಾಗಿ ಈ ಸಂವಾದ ಏರ್ಪಡಿಸಲಾಗಿದ್ದು, ಯುಜಿಡಿ ಕಾಮಗಾರಿ, ಕಲಾಭವನ ಕಾಮಗಾರಿ ಆದಷ್ಟು ಬೇಗ ಪೂರ್ಣ ಆಗಬೇಕು. 24 ಗಂಟೆ ಕುಡಿಯುವ ನೀರಿನ ಯೋಜನೆ ಕುಶಾಲನಗರಕ್ಕೆ ಬೇಕು. ಪುರಸಭಾ ಭವನ ಕಟ್ಟಡ ಕಾಮಗಾರಿ ವೇಗವಾಗಿ ನಡೆಯಬೇಕು. ಕುಶಾಲನಗರಕ್ಕೆ ಹೊಸ ಕೈಗಾರಿಕಾ ಬಡಾವಣೆ ಬೇಕು, ಸರ್ಕಾರಿ ಆಸ್ಪತ್ರೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮೇಲ್ದರ್ಜೆಗೆ ಏರಿಸಬೇಕು ಎನ್ನುವ ಬೇಡಿಕೆ ಇಟ್ಟರು.

ಶ್ರೀ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್ ಮಾತನಾಡಿ, ಬೆಳೆಯುತ್ತಿರುವ ಪಟ್ಟಣವಾಗಿರುವ ಕುಶಾಲನಗರಕ್ಕೆ ಮೂಲ ಸೌಕರ್ಯಗಳ ಅಗತ್ಯವಿದೆ. ಪಕ್ಕದ ಮೈಸೂರು ಜಿಲ್ಲೆ ದಿಂಡಗಾಡು, ಆವರ್ತಿಯಿಂದ ಪರ್ಯಾಯ ರಸ್ತೆ ಬೇಕು. ಹಾರಂಗಿ ರಸ್ತೆ ಮೇಲ್ದರ್ಜೆಗೆ ಏರಿಸಬೇಕು. ಸಂಚಾರಿ ವ್ಯವಸ್ಥೆ ಸರಿಯಾಗಬೇಕು. ರೈಲ್ವೇ ಯೋಜನೆ ಪೂರ್ಣಗೊಳಿಸಲು ಆದ್ಯತೆ ಕೊಡಬೇಕು. ಕುಶಾಲನಗರಕ್ಕೆ ಬಂದಿರುವ ಯೋಜನೆಗಳು ಪೂರ್ಣ ಆಗುವಲ್ಲಿ ಶಾಸಕರು ಒತ್ತಡ ಹೇರಬೇಕು ಎಂದರು.

ಸಾಮಾಜಿಕ ಹೋರಾಟಗಾರ ಚಂದ್ರು ಮಾತನಾಡಿ ಮುಂದಿನ ದಿನಗಳಲ್ಲಿ ಕಟ್ಟಿಗೆ ಅಭಾವ ತಲೆದೋರುವುದರಿಂದ ಕುಶಾಲನಗರ ಹಿಂದು ರುದ್ರಭೂಮಿಗೆ ವಿದ್ಯುತ್ ಚಿತಾಗಾರ ಬೇಕು. ಅಲ್ಲಿ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದರು. ಸ್ಥಳೀಯರಾದ ವಿಮಲ್ ಕುಶಾಲನಗರಕ್ಕೆ ಹೃದ್ರೋಗ ತುರ್ತು ಚಿಕಿತ್ಸಾ ಘಟಕದ ಅಗತ್ಯತೆ ಬಗ್ಗೆ ಶಾಸಕರ ಗಮನ ಸೆಳೆದರು. ಹಿರಿಯರಾದ ಕೆ.ಕೆ. ನಾಗರಾಜ ಶೆಟ್ಟಿ, ಕೈಗಾರಿಕಾ ಬಡಾವಣೆಯಲ್ಲಿ ಗುಂಡೂರಾವ್ ಪುತ್ಥಳಿ ನಿರ್ಮಿಸಬೇಕು. ಕುಶಾಲನಗರ ಪ್ರವೇಶದ್ವಾರದಲ್ಲಿ ಹೆಬ್ಬಾಗಿಲು ನಿರ್ಮಿಸಬೇಕು ಎಂದರೆ. ಟಿ.ಆರ್. ಪ್ರಭುದೇವ್ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದರು. ಚಂದ್ರಮೋಹನ್ ಮಾತನಾಡಿ, ಕಾವೇರಿ ನದಿ ಮತ್ತಿ ನಗರದ ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಸುಸಜ್ಜಿತ ತಾಲೂಕು ಕ್ರೀಡಾಂಗಣವೊAದರ ಅಗತ್ಯವಿದೆ ಎಂದರು.

ಹಳೆಯ ಮಾರುಕಟ್ಟೆಗೆ ಲಕ್ಷಾಂತರ ರೂ. ವೆಚ್ಚ ಮಾಡಲಾಗಿದೆ. ಅದು ಉಪಯೋಗ ಆಗಬೇಕು. ಪಟ್ಟಣದಲ್ಲಿ ಟ್ರಾಫಿಕ್ ಪೊಲೀಸ್ ನಿಯೋಜನೆ ಬದಲು ಆಧುನಿಕ ಕ್ಯಾಮೆರಾಗಳ ಅಳವಡಿಕೆ ಆಗಬೇಕು. ಕಾವೇರಿ ನದಿಯಲ್ಲಿ ಹೂಳು ತೆಗೆದು ಮಳೆಗಾಲದಲ್ಲಿ ಉಂಟಾಗುವ ಪ್ರವಾಹ ತಪ್ಪಿಸಬೇಕು. ಜಿಎಂಪಿ ಶಾಲೆ ಎದುರು ರಾಷ್ಟಿçÃಯ ಹೆದ್ದಾರಿ 275ಕ್ಕೆ ಅಡ್ಡಲಾಗಿ ಸ್ಕೆöÊವಾಕ್ ಬೇಕು ಎನ್ನುವ ಬೇಡಿಕೆಗಳು ಕೇಳಿಬಂದವು.

ಪುರಸಭೆ ಅಧ್ಯಕ್ಷೆ ಜಯಲಕ್ಷಿö್ಮÃ ಚಂದ್ರು, ಕುಶಾಲನಗರ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ, ಪ್ರಮೋದ್ ಮುತ್ತಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು, ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು, ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಸಂವಾದದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net