ಸತ್ತೂರಿನಲ್ಲಿ ಸಮುತ್ಸವ,ಬಸವೇಶ್ವರ ಎಜ್ಯುಕೇಶನ್ ಟ್ರಸ್ಟ್ ವಾರ್ಷಿಕೋತ್ಸವ

IMG_20240203_112956_219.jpg
Published on

ಹುಬ್ಬಳ್ಳಿ: ಧಾರವಾಡ ತಾಲೂಕಿನ ಸತ್ತೂರಿನಲ್ಲಿರುವ ಶ್ರೀ ಶರಣಬಸವೇಶ್ವರರ ಮೂತಿರ್ ಪ್ರತಿಷ್ಠಾಪನೆಯ 5ನೇ, ಶ್ರೀಬಸವೇಶ್ವರ ರೂರಲ್ ಎಜ್ಯುಕೇಶನ್ ಹಾಗೂ ಡೆವಲಪ್ಮೆಂಟ್ ಟ್ರಸ್ಟ್ 20ನೇ ಹಾಗೂ ಡಾ. ಶರಣಪ್ಪ ಎಂ. ಕೊಟಗಿ ಚಾರಿಟಬಲ್ ಟ್ರಸ್ಟ್ನ 7ನೇ ವಾರ್ಷಿಕೋತ್ಸವದ ಅಂಗವಾಗಿ ಸಮುತ್ಸವ- 2024 ಕಾರ್ಯಕ್ರಮವನ್ನು ಫೆ. 5ರಂದು ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಡಾ. ಶರಣಪ್ಪ ಕೊಟಗಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ತೂರಿನ ಶ್ರೀ ಬಸವೇಶ್ವರ ರೂರಲ್ ಕಾಲೇಜು ಆವರಣದಲ್ಲಿ ಸಮಾರಂಭ ನಡೆಯಲಿದೆ. ಧಾರವಾಡ ಮುರಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಶಿರಹಟ್ಟಿ ಭಾವೈಕ್ಯ ಸಂಸ್ಥಾನ ಪೀಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ಮಹಾ ಸಂಸ್ಥಾನದ ವಂಶಸ್ಥರಾದ ಲಿಂಗರಾಜ ಅಪ್ಪ ಸಾನ್ನಿಧ್ಯ ವಹಿಸುವರು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಉದ್ಘಾಟನೆ ನೆರವೇರಿಸುವರು. ವಿಧಾನ ಪರಿಷತ್ ಮಾಜಿ ಸಭಾಪತಿ ಡಾ. ವೀರಣ್ಣ ಮತ್ತಿಕಟ್ಟಿ ಅಧ್ಯಕ್ಷತೆ ವಹಿಸುವರು. ಸಂಜೆ 5.30ಕ್ಕೆ ವಿವಿಧ ಸಾಂಸತಿಕ ಕಾರ್ಯಕ್ರಮಗಳು ನಡೆಯಲಿದ್ದು, ಡಾ. ಪ್ರಶಾಂತ ರಾಮನಗೌಡರ, ಸುಬ್ಬರಾಯ ಚೌದ್ರಿ ಇತರರು ಪಾಲ್ಗೊಳ್ಳುವರು. ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ. ಮಹಾಂತೇಶ ಹಿರೇಮಠ ಮಾತನಾಡಿ, 2004ರಲ್ಲಿ ಇದೇ ಕಾಲೇಜಿನಲ್ಲಿ ಅಧ್ಯಯನ ಮಾಡಿ ಇದೀಗ ಉನ್ನತ ಹುದ್ದೆ ಪಡೆದಿರುವೆ. ಸಂಸ್ಥೆಯು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕ ಆಧ್ಯತೆ ನೀಡಿದೆ. ಪ್ರತಿಭಾವಂತರ ಅಧ್ಯಯನಕ್ಕೆ ಅನುಕೂಲ ಮಾಡಿಕೊಡುತ್ತಿದೆ. ಅನೇಕ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಟ್ರಸ್ಟಿ ನಾಗರಾಜ ಕೊಟಗಿ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮವಾದ ದೃಷ್ಟಿಕೋನ ಇಟ್ಟುಕೊಂಡು ಗ್ರಾಮೀಣ ಜನರಿಗೆ ಅದರಲ್ಲೂ ಬಡವರು, ಆರ್ಥಿಕ ಹಿಂದುಳಿದವರಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.

ಟ್ರಸ್ಟಿ ಮೃತ್ಯುಂಜಯ ಕೊಟಗಿ, ವಿ.ಜಿ. ಪಾಟೀಲ್, ನವೀನ್ ಕರೇರ, ಲಕ್ಷ್ಮಿಕಾಂತ ಬುಡ್ಡನವರ ಗೋಷ್ಠಿಯಲ್ಲಿದ್ದರು.

ವಿಶ್ವಾಸವಿದೆ: ಕಳೆದ ಮೂರು ದಶಕದಿಂದ ಕಾಂಗ್ರೆಸ್ ಪದ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಹೈಕಮಾಂಡ್ ತಮ್ಮನ್ನು ಧಾರವಾಡ ಕ್ಷೇತ್ರದ ಅಧಿಕೃತ ಅಭ್ಯಥಿರ್ಯಾಗಿ ಘೋಷಣೆ ಮಾಡುವ ಭರವಸೆ ಇದೆ ಎಂದು ಡಾ. ಶರಣಪ್ಪ ಕೊಟಗಿ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net