ಸಮುತ್ಕರ್ಷದಿಂದ ಪ್ರವೇಶ ಪರೀಕ್ಷೆ 3ರಂದು,  ವಿದ್ಯಾರ್ಥಿಗಳಿಗೆ ಐಎಎಸ್ ಫೌಂಡೇಷನ್ ಕೋರ್ಸ್

IMG-20250730-WA0027.jpg
Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಸಮುತ್ಕರ್ಷ ಐಎಎಸ್ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಶಾಲೆ ಮಕ್ಕಳಲ್ಲಿ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ತಯಾರಿ ನಡೆಸಲು ಉಚಿತ ಕೋರ್ಸ್ ಗಳನ್ನು ನಡೆಸುತ್ತಿದ್ದು, ಇಂತಹ ತರಬೇತಿಗೆ ಆಗಸ್ಟ್ 3ರಂದು ಬೆಳಗ್ಗೆ 10ಕ್ಕೆ ಪ್ರವೇಶ ಪರೀಕ್ಷೆ ಆಯೋಜಿಸಿದೆ.

ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗೆ ಶ್ರದ್ಧಾ ಮತ್ತು ಮೇಧಾ ಎಂಬ ಹೆಸರಿನ ಐಎಎಸ್ ಫೌಂಡೇಷನ್ ಕೋರ್ಸ್ ಗಳನ್ನು ನಡೆಸುತ್ತಿದೆ. 6, 7, 8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳಿಗೆ ನಾಗರಿಕ ಸೇವಾ ಪರೀಕ್ಷೆಗಳಿಗೆ ಅಗತ್ಯವಿರುವ ಮಾನಸಿಕ, ಬೌದ್ಧಿಕ ಸಾಮರ್ಥ್ಯಗಳ ಬೆಳವಣಿಗೆ ಹಾಗೂ ಕೌಶಲಾಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳ ಮೂಲಕ ಶಾಲೆ ಹಂತದಲ್ಲಿಯೇ ಉನ್ನತ ಕನಸು ಕಾಣುವತ್ತ ಅಡಿಪಾಯ ಹಾಕಲಾಗುತ್ತಿದೆ.

ಆ. 3ರಂದು ಹುಬ್ಬಳ್ಳಿಯ ವಿದ್ಯಾನಗರ ಬಿವಿಬಿ ಕ್ಯಾಂಪಸ್ ನಲ್ಲಿರುವ ಸಮುತ್ಕರ್ಷ ಕೇಂದ್ರ ಕಚೇರಿಯಲ್ಲಿ ಪ್ರವೇಶ ಪರದೆಯ ಏರ್ಪಡಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮೂಲಕ ಕೋರ್ಸ್ ಗೆ ಪ್ರವೇಶ ಪಡೆಯಬಹುದು ಎಂದು ಸಮುತ್ಕರ್ಷ ಟ್ರಸ್ಟ್ ಮಹಾನಿರ್ದೇಶಕಿ ಅನ್ನಪೂರ್ಣ ಹಂಪಿಹೊಳಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net