ಆ. 31 ರಂದು ತಣ್ಣೀರುಬಾವಿಯಲ್ಲಿ ಸಮುದ್ರ ಪೂಜೆ

IMG-20230824-WA0317
Published on

ಮಂಗಳೂರು: ಮಂಗಳೂರು ಏಳುಪಟ್ಣ ಮೊಗವೀರ ಸಂಯುಕ್ತ ಸಭಾ ( ಕದ್ರಿ) ವತಿಯಿಂದ ವರ್ಷಂಪ್ರತಿ ಸಾಂಪ್ರದಾಯಿಕ ವಾಗಿ ಆಚರಿಸುವ ಸಾಮೂಹಿಕ ಸಮುದ್ರ ಪೂಜೆ ಆಗಸ್ಟ್ 31 ರಂದು ಬೆಳಗ್ಗೆ 10 ಗಂಟೆಗೆ ತಣ್ಣೀರುಬಾವಿ ಸಮುದ್ರ ಕಿನಾರೆಯಲ್ಲಿ ನಡೆಯಲಿದೆ.
ಕದ್ರಿ ಶ್ರೀ ಕ್ಷೇತ್ರ ಸುವರ್ಣ ಕದಳೀ ಮಠದ ಮಠಾಧಿಪತಿ ಶ್ರೀ ರಾಜಯೋಗಿ ನಿರ್ಮಲಾನಾಥ ಜೀ ಮಹಾರಾಜ್ ಅವರ ಸಾನಿಧ್ಯದಲ್ಲಿ ಪೂಜೆ ನೆರವೇರಲಿದೆ.
ಮಂಗಳೂರು ಏಳುಪಟ್ಣ ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ಲೋಕೇಶ್ ಸುವರ್ಣ ಹಾಗೂ ಗ್ರಾಮದ ಗುರಿಕಾರರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net