

ನಗರದ ಆದರ್ಶ ಶಿಕ್ಷಣ ಸಂಸ್ಥೆಗೆ ಸುವರ್ಣ ಮಹೋತ್ಸವ ಭವನದಲ್ಲಿ ನೆಹರು ಯುವ ಕೇಂದ್ರ ಹಾಗೂ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಕಲಾ ವಿಭಾಗದ ಸಹಯೋಗದಲ್ಲಿ ಗದಗ ಜಿಲ್ಲಾ ಮಟ್ಟದ ಯುವ ಉತ್ಸವ-2023 ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಚಿವರಾದ ಡಾ. ಎಚ್ ಕೆ ಪಾಟೀಲ ಅವರು ಜ್ಯೋತಿ ಬೆಳಗಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿ, ಕನ್ನಡ ನಾಡಿಗೆ ಸಾಹಿತ್ಯ ಸಂಗೀತ ಕಲಾ ರಂಗದ ಅಪೂರ್ವ ಕೊಡುಗೆ ನೀಡಿರುವ ಗದಗ ಜಿಲ್ಲೆ ಇತಿಹಾಸ ಭವ್ಯವಾಗಿದ್ದು ಭಾರತ ರತ್ನಗಳಾಗುವ ಹತ್ತು ಹಲವಾರು ಪ್ರತಿಭೆಗಳಿಗೆ ಜನ್ಮ ನೀಡಿದ ಕಾರಣವಾಗಿದೆ. ಕುಮಾರವ್ಯಾಸ ,ಪಂಪ, ಅತ್ತಿಮಬ್ಬೆ, ಹುಯಿಲಗೋಳ ನಾರಾಯಣರಾವ್ ಅನೇಕ ಮಹಾತ್ಮರು ಜನ್ಮ ತಾಳಿದ ನಾಡು ಗದಗ ವೀರನಾರಾಯಣ ಮತ್ತು ತ್ರಿಕಟೇಶ್ವರ ದೇವಾಲಯಗಳು ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿವೆ. ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ವೀರೇಶ್ವರ ಪುಣ್ಯಶ್ರಮ ಹಿಂದುಸ್ತಾನಿ ಗಾಯಕ ಭಾರತರತ್ನ ಪ್ರಶಸ್ತಿ ಪುರಸ್ಕೃತ ಪಂಡಿತ್ ಭೀಮ್ ಸೇನ್ ಜೋಶಿಯ ನೆಲೆಬೀಡು ಕನ್ನಡ ಸಾಹಿತ್ಯ ಮತ್ತು ಸ್ವತಂತ್ರ ಹೋರಾಟಗಾರ ನಾರಾಯಣರಾವ ಪುಟ್ಟರಾಜ ಗವಾಯಿಗಳು ಸುನಿಲ್ ಜೋಶಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅನೇಕ ಸಾಧಕರನ್ನು ಕಾಣಬಹುದು ಅಂತಹ ಸಾಧಕರ ಮಾರ್ಗದರ್ಶನದಲ್ಲಿ ಯುವಕರು ಎಲ್ಲ ಕ್ಷೇತ್ರಗಳಲ್ಲೂ ಬೆಳೆಯಲು ಇಂತಹ ಉತ್ಸವಗಳು ಸ್ಪೂರ್ತಿಯಾಗಲೆಂದು ತಮ್ಮ ಉದ್ಘಾಟನಾ ನುಡಿಗಳಲ್ಲಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ ವಿ ಕುಷ್ಟಗಿ ಚೇರ್ಮನ್ ಶ್ರೀ ಆನಂದ್ ಪೋತ್ನಿಸ್ ಉಪಾಧ್ಯಕ್ಷರಾದ ಶ್ರೀ ಜಿ ವಿ ಬೆಳಗಾನೂರ ಕಾರ್ಯದರ್ಶಿಗಳಾದ ಶ್ರೀ ಎ ಡಿ ಗೋಡಕಿಂಡಿ. ಖಜಾಂಚಿ ಮುಕುಂದ ಪೋತ್ನಿಸ್, ಸದಸ್ಯರಾದ ವಿಜಯ ಭಾಗಮಾರ್, ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಅನ್ನಪೂರ್ಣ, ಮಾಜಿ ಜಿಲ್ಲಾ ಪಂಚಾಯತಿಯ ಅಧ್ಯಕ್ಷರಾದ ಶ್ರೀ ಸಿದ್ದು ಪಾಟೀಲ್, ನೆಹರು ಯುವ ಕೇಂದ್ರದ ಮುಖ್ಯಸ್ಥರಾದ ಎನ್ ರಜನಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಕೆ ಗಿರಿರಾಜ ಕುಮಾರ್ ಹಾಗೂ ಉಪ ಪ್ರಾಚಾರ್ಯರು ಐ ಕ್ಯೂ ಎ ಸಿ ಕೋ-ಆರ್ಡಿನೇಟರ್ ಡಾ. ವಿ ಟಿ ನಾಯಕರ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕಲಾವಿಭಾಗದ ಅಧ್ಯಕ್ಷರಾದ ಪ್ರೊ. ಬಾಹುಬಲಿ ಜೈನರ ನಡೆಸಿಕೊಟ್ಟರು. ಯುವ ಉತ್ಸವ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದ ಅನೇಕ ಸ್ಪರ್ಧಾಳಗಳು ಹಾಗೆ ಆದರ್ಶ ಶಿಕ್ಷಣ ಸಮಿತಿಯ ಅಂಗಸಂಸ್ಥೆಗಳ ಪ್ರಾಚಾರ್ಯರು ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.