ಸಂಸ್ಕಾರ ನೀಡುವಲ್ಲಿ ಶಿಕ್ಷಕರ ಪಾತ್ರ ಹಿರಿದು

teachers
ಕಂಪ್ಲಿಯಲ್ಲಿ ಆಯೋಜಸಿದ್ದ ಶಿಕ್ಷಕ ದಿನಾಚರಣೆ ಸಮಾರಂಭಕ್ಕೆ ಶಾಸಕ ಜೆ.ಎನ್.ಗಣೇಶ್ ಚಾಲನೆಗೊಳಿಸಿದರು. ಪ್ರಮುಖರಾದ ಶಿವಕುಮಾರ, ಕೆ.ಶ್ರೀನಿವಾಸರಾವ್, ಎಂ.ಎ.ನಾಗನಗೌಡ, ಹನುಮಂತಪ್ಪ, ಟಿ.ಎಂ.ಬಸವರಾಜ, ಸಿ.ನಿಂಗಪ್ಪ ಇತರರಿದ್ದರು.
Published on

ಕಂಪ್ಲಿ: ಶಿಕ್ಷಕರಿಗೆ ನಿವೇಶನ ಗುರುತಿಸಿ ಗುರುಭವನ ನಿರ್ಮಿಸಿಕೊಡಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ತಾಲೂಕು ಸಂಘಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಪಾಠಶಾಲೆ

ಮಕ್ಕಳಿಗೆ ಗುಣಾತ್ಮಕ ಶಿಕ್ಷಣದೊಂದಿಗೆ ಸಂಸ್ಕಾರವನ್ನು ನೀಡುವಲ್ಲಿ ಶಿಕ್ಷಕರ ಪ್ರಾಮಾಣಿಕ ಪ್ರಯತ್ನ ಅಗತ್ಯವಿದೆ ಎಂದರು. ಶಾಸಕರು ತಮ್ಮ ಶಾಲೆ-ಕಾಲೇಜು ದಿನಗಳಲ್ಲಿ ಶಿಕ್ಷಕ-ಉಪನ್ಯಾಸಕರನ್ನು ಸ್ಮರಿಸಿಕೊಂಡರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ತಾಲೂಕಿನಿಂದ 60ಶಿಕ್ಷಕರು ವರ್ಗಗೊಂಡಿದ್ದು, ಖಾಲಿ ಸ್ಥಾನಗಳಿಗೆ ಹೊಸದಾಗಿ ಶಿಕ್ಷಕರನ್ನು ವರ್ಗಮಾಡಿಕೊಡಬೇಕು. ಶಿಕ್ಷಕರ ಸಹಕಾರ ಸಂಘ ರಚಿಸುವ ಅಗತ್ಯವಿದೆ ಎಂದರು.

ನಿವೃತ್ತ ಶಿಕ್ಷಕರಾದ ಖುರ್ಷಿದಾಬೇಗಮ್, ಸುಜಾತ, ಟಿ.ನಾಗರತ್ನ, ಎ.ಯರ‌್ರಿಸ್ವಾಮಿ, ಎಚ್.ದ್ರೌಪತಿ, ಜಗದೀಶಯ್ಯಸ್ವಾಮಿ, ಗೋದಾವರಿ, ಸಣ್ಣ ಹನುಮಂತ ಕಾಟಾಪುರ, ಉತ್ತಮ ಶಾಲೆಗಳ ಆಯ್ಕೆಗೊಂಡ ಇಟಗಿ, ರಾಮಸಾಗರ, ದೇವಸಮುದ್ರ, ಮೆಟ್ರಿ, ವೇಣಿಕ್ಯಾಂಪ್, ಸುಗ್ಗೇನಹಳ್ಳಿ ಸಹಿಪ್ರಾ ಶಾಲೆ, ಹಂಪಿ ಗುರುಕುಲ, ಕಲ್ಮಠ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ರಾಮಸಾಗರದ ಸರ್ಕಾರಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಮತ್ತು ದಾನಿಗಳನ್ನು ಗೌರವಿಸಲಾಯಿತು.

ತಹಸೀಲ್ದಾರ್ ಗೌಸಿಯಾಬೇಗಮ್, ಬಿಇಒ ಸಿದ್ದಲಿಂಗಮೂರ್ತಿ, ಜನಪ್ರತಿನಿಧಿಗಳಾದ ಕೆ.ಶ್ರೀನಿವಾಸರಾವ್, ಕೆ.ಷಣ್ಮುಖಪ್ಪ, ಕೆ.ಎಸ್.ಚಾಂದ್‌ಬಾಷಾ, ಲಡ್ಡು ಹೊನ್ನೂರವಲಿ, ಶಿಕ್ಷಕ ಸಂಘದ ಪದಾಧಿಕಾರಿಗಳಾದ ಎಂ.ಎ.ನಾಗನಗೌಡ, ಸಿ.ನಿಂಗಪ್ಪ, ಎಚ್.ದೊಡ್ಡಬಸಪ್ಪ, ಸುಜಾತ, ಟಿ.ಎಂ.ಬಸವರಾಜ್, ವಿ.ಪಕ್ಕೀರಪ್ಪ, ಸುನಿತಾ ಪೂಜಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net