

ಬೆಂಗಳೂರು: ನಗರದಲ್ಲಿ ಮುಂಚೂಣಿಯಲ್ಲಿರುವ ಕ್ಯಾನ್ಸರ್ ಮತ್ತು ಕ್ರಿಟಿಕಲ್ ಕೇರ್ ಸೆಂಟರ್‌ಗಳಲ್ಲಿ ಒಂದಾದ ಸಂಪ್ರದ ಆಸ್ಪತ್ರೆಯು ಅತ್ಯಾಧುನಿಕ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ (ಮೂಳೆ ಮಜ್ಜೆ ಕಸಿ) ಘಟಕ ಆರಂಭಿಸಿದೆ. ಇದರೊಂದಿಗೆ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ವಿಶ್ವದರ್ಜೆಯ ಕ್ಯಾನ್ಸರ್ ಚಿಕಿತ್ಸೆ ಒದಗಿಸುವುದು ಆಸ್ಪತ್ರೆಯ ಉದ್ದೇಶವಾಗಿದೆ.
ಈ ನೂತನ ಘಟಕವನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ
ಸೂರ್ಯ ಉದ್ಘಾಟಿಸಿದ್ದು, ಬಸವನಗುಡಿ ಕ್ಷೇತ್ರದ ಶಾಸಕ ಎಲ್. ಎ. ರವಿ ಸುಬ್ರಮಣ್ಯ, ಆಸ್ಪತ್ರೆಯ ಸೀನಿಯರ್ ಕನ್ಸಲ್ಟೆಂಟ್ ಮೆಡಿಕಲ್ ಆಂಕಾಲಾಜಿ ಮತ್ತು ಬಿಎಂಟಿ ಘಟಕದ ಮುಖ್ಯಸ್ಥ ಡಾ. ರಾಧೇಶ್ಯಾಂ ನಾಯಕ್ ಇತರರು ಉಪಸ್ಥಿತರಿದ್ದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಸಂಪ್ರದ ಆಸ್ಪತ್ರೆಯಲ್ಲಿ ಆರಂಭಿಸಿರುವ ಈ ಮೂಳೆ ಮಜ್ಜೆ ಕಸಿ ಘಟಕ ಬೆಂಗಳೂರಿನ ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲಾಗಿದೆ. ಇದು ನಗರದ ಅತ್ಯಾಧುನಿಕ ವೈದ್ಯಕೀಯ ಆರೈಕೆ ಮತ್ತು ಆವಿಷ್ಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸಾಮಾನ್ಯರಿಗೂ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಬೇಕು ಎಂದು ಆಸ್ಪತ್ರೆಯ ಉದ್ದೇಶ ಶ್ಲಾಘನೀಯ. ಈ ರೀತಿಯ ಉಪಕ್ರಮಗಳು ಆರೋಗ್ಯಕರ ಮತ್ತು ಬಲಿಷ್ಠ ಭಾರತದ ಅಭಿವೃದ್ಧಿ ದೃಷ್ಟಿಕೋನಕ್ಕೆ ಪೂರಕವಾದದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದು ನಮ್ಮ ನಗರದ ಅತ್ಯಾಧುನಿಕ ವೈದ್ಯಕೀಯ ಆರೈಕೆ
ಶಾಸಕ ಎಲ್.ಎ. ರವಿ ಸುಬ್ರಮಣ್ಯ ಮಾತನಾಡಿ, ಗಂಭೀರವಾದ ರಕ್ತಸಂಬಂಧಿ
ರೋಗಗಳು ಮತ್ತು ಕ್ಯಾನ್ಸರ್ ನಂತಹ ಕಾಯಿಲೆಯೊಂದಿಗೆ ಹೋರಾಡುತ್ತಿರುವವರಿಗಾಗಿಯೇ ಮೀಸಲಾದ ಮೂಳೆ ಮಜ್ಜೆ ಕಸಿ ಘಟಕವನ್ನು ಆರಂಭಿಸಿರುವುದು ಸ್ವಾಗತಾರ್ಹ ಹೆಜ್ಜೆ. ಇಂತಹ ಬೆಳವಣಿಗೆಗಳು ಆರೋಗ್ಯ ಮೂಲಸೌಕರ್ಯವನ್ನು ಇನ್ನಷ್ಟು ಬಲಪಡಿಸುತ್ತವೆ. ರೋಗಿಗಳಿಗೆ ಸಮೀಪದಲ್ಲೇ ಸುಧಾರಿತ ಚಿಕಿತ್ಸೆಯ ಆಯ್ಕೆಗಳನ್ನು ಒದಗಿಸುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯ ಸೇವೆಯನ್ನು ಒದಗಿಸಲು ಈ ಘಟಕವನ್ನು ಸಮರ್ಪಿಸಿದ ಸಂಪ್ರದ ಆಸ್ಪತ್ರೆಯ ತಂಡಕ್ಕೆ ಅಭಿನಂದೆ ಸಲ್ಲಿಸಿದರು.
ಆಸ್ಪತ್ರೆಯ ಸೀನಿಯರ್ ಕನ್ಸಲ್ಟೆಂಟ್ ಮೆಡಿಕಲ್ ಆಂಕಾಲಾಜಿ ಮತ್ತು ಬಿಎಂಟಿ ಘಟಕದ ಮುಖ್ಯಸ್ಥ ಡಾ. ರಾಧೇಶಾಂ ನಾಯಕ್ ಮಾತನಾಡಿ, ಬೆಂಗಳೂರಿನಲ್ಲಿ ಮೂಳೆ ಮಜ್ಜೆ ಕಸಿ ಚಿಕಿತ್ಸೆ ಒದಗಿಸುತ್ತಿರುವ ಕೆಲವೇ ಕೆಲ ಆಸ್ಪತ್ರೆಗಳಿದ್ದು, ಅಲ್ಲಿ ಈ ಸೇವೆ ಅತ್ಯಂತ ದುಬಾರಿಯಾಗಿದೆ. ಈ ನಿಟ್ಟಿನಲ್ಲಿ ಸಂಪ್ರದ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಆಧಾರಿತ ಸೌಲಭ್ಯವನ್ನು ಜನರ ಕೈಗೆಟುಕುವ ದರದಲ್ಲಿ ಒದಗಿಸಲು ಬದ್ಧವಾಗಿದೆ ಎಂದು ತಿಳಿಸಿದರು.