ಸಮಾಜಮುಖಿ ಸೇವೆಯಿಂದ ಸಾರ್ಥಕತೆ

29Huk1-Web
ಮಾಂಜರಿ ಗ್ರಾಮದಲ್ಲಿ ಏಕತಾ ಸೋಷಿಯಲ್ ಫೌಂಡೇಷನ್ ಉದ್ಘಾಟನೆ ಸಮಾರಂಭ ಭಾನುವಾರ ಜರುಗಿತು. ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ರಾಮಗೌಡ ಪಾಟೀಲ, ಆನಂದ ಅರವಾರೆ, ಮಾಯಾ ಭೀಲವಡೆ, ಲಕ್ಷ್ಮಣಪ್ಪ ಆರಿ ಇತರರು ಇದ್ದರು.
Published on

ಮಾಂಜರಿ: ಸಮಾಜಮುಖಿ ಕಾರ್ಯಗಳಿಂದ ಬದುಕು ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಿರುವ ಏಕತಾ ಸೋಷಿಯಲ್ ಫೌಂಡೇಷನ್ ಉದ್ಘಾಟನೆ ಹಾಗೂ ಕರೊನಾ ಸೇನಾನಿಗಳಿಗೆ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಮಾಜಿ ಶಾಸಕ ಕಲ್ಲಪ್ಪ ಮಗೆಣ್ಣವರ, ಶಿರಗುಪ್ಪಿ ಗ್ರಾಪಂ ಸದಸ್ಯ ರಾಮಗೌಡ ಪಾಟೀಲ, ಭಾರತೀಯ ಜೀವವಿಮಾ ನಿಗಮದ ಅಧಿಕಾರಿ ಆನಂದ ಅರವಾರೆ, ಮಾಂಜರಿ ಗ್ರಾಪಂ ಅಧ್ಯಕ್ಷೆ ಮಾಯಾ ಬಿಲವಡೆ, ಲಕ್ಷ್ಮಣಪ್ಪ ಆರಿ, ಪಾಂಡುರಂಗ ಮಾನೆ, ಗ್ರಾಪಂ ಸದಸ್ಯ ಬಬನ ಭೀಲವಡೆ, ಸಿದ್ದಾರ್ಥ ಗಾಯಾಗೋಳ, ಸುಭಾಷ ನರವಾಡೆ, ಡಾ. ವಿಜಯ ಉಪಾಧ್ಯೆ, ಸುಧೀರ ಕೋಟೆವಾಲೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net