ಸಮೀಕ್ಷಾ ಕಾರ್ಯಕ್ಕೆ ನಾನಾ ಸಮಸ್ಯೆ

sameekshe
Published on

ಮಡಿಕೇರಿ:

ಸರ್ಕಾರದ ಮಹತ್ವಾಕಾಂಕ್ಷಿ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷಾ ಕಾರ್ಯಕ್ಕೆ ಕೊಡಗಿನಲ್ಲಿ ಸಮಸ್ಯೆಗಳ ಮೇಲೆ ಸಮಸ್ಯೆ ಎದುರಾಗುತ್ತಿರುವ ಬಗ್ಗೆ ಸಮೀಕ್ಷೆದಾರರಾಗಿ ಪಾಲ್ಗೊಂಡಿರುವ ಶಿಕ್ಷಕರು ದೂರಿಕೊಂಡಿದ್ದಾರೆ. ದಿನಕ್ಕೆ ಒಂದು ಮನೆಯ ಸಮೀಕ್ಷೆ ನಡೆಸುವುದು ಕೂಡ ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

ಆಪ್ಯ್ನಲ್ಲಿ ಆಗಾಗ್ಗೆ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದ್ದು ಒಟಿಪಿ ಬರುವ ಹಂತದಲ್ಲೇ ಸಮಸ್ಯೆ ಆಗುತ್ತಿದೆ. ಆಗಾಗ್ಗೆ ಕಾಣಿಸಿಕೊಳ್ಳುವ ಎರರ್ ಸಂದೇಶಗಳು ಶಿಕ್ಷಕರನ್ನು ಹೈರಾಣಾಗಿಸಿದೆ. 60 ಪ್ರಶ್ನೆಗಳಿಗೆ ಉತ್ತರ ತುಂಬುವಾಗ ಒಂದು ದಿನ ಪೂರ್ಣಗೊಳ್ಳುತ್ತಿದೆ. ಮೇಲ್ವಿಚಾರಕರಿಗೆ ಪದೇ ಪದೇ ಕರೆ ಮಾಡಿ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಗುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಕೂಡ ಸಮೀಕ್ಷೆದಾರರನ್ನು ಕಾಡುತ್ತಿದೆ. ಆನೆ ಹಾವಳಿ ಪ್ರದೇಶಗಳಿಗೆ ಒಬ್ಬೊಬ್ಬರೇ ತೆರಳುವುದು ಅಪಾಯಕಾರಿಯಾಗಿದ್ದು, ತಮಗೆ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಗಣತಿದಾರ ಶಿಕ್ಷಕರ ಪರದಾಟದ ಬಗ್ಗೆ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಭೇಟಿ ಮಾಡಿ ಈ ಸಂಬAಧ ಮನವಿಯನ್ನೂ ಸಲ್ಲಿಸಲಾಗಿದೆ. ವಿಷಯವನ್ನು ಶಾಸಕ ಡಾ. ಮಂತರ್ ಗೌಡ ಅವರ ಗಮನಕ್ಕೂ ತರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net