18ಕ್ಕೆ ಸೇಮ್ ಸೇಮ್ ಬಟ್ ಡಿಫರೆಂಟ್ ನಾಟಕ

same same
ಸೇಮ್ ಸೇಮ್ ಬಡ್ ಡಿಫರೆಂಟ್ ನಾಟಕದ ಒಂದು ದೃಶ್ಯ
Published on

ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ಸಹ್ಯಾದ್ರಿ ರಂಗತರಂಗ ಹಾಗೂ ದಕ್ಷಿಣ ಭಾರತ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಆ.18ರ ಸಂಜೆ 6.30ಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ಸೇಮ್ ಸೇಮ್ ಬಟ್ ಡಿಫರೆಂಟ್ ಎಂಬ ಸಂಗೀತ ಆಧಾರಿತ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ರಂಗಕರ್ಮಿ ಡಾ. ಎಚ್.ಎಸ್.ನಾಗಭೂಷಣ ಹೇಳಿದರು.

ಮುಂಬೈನ ಪ್ರಖ್ಯಾತ ರಂಗ ತಂಡ ತಮಾಷಾ ಥಿಯೇಟರ್ಸ್ ಕಲಾವಿದರು ನಾಟಕ ಪ್ರದರ್ಶಿಸುವರು. ಸಪನ್ ಸರನ್ ನಾಟಕ ನಿರ್ದೇಶನ ಮಾಡಿದ್ದು, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂರಾರು ಪ್ರದರ್ಶನ ಕಂಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎರಡು ವಿಭಿನ್ನ ಹಿನ್ನೆಲೆಯಿಂದ ಬಂದ ಇಬ್ಬರು ಪ್ರತಿಭಾವಂತ ಗಾಯಕರು ಅನೇಕ ಸಾಮಾಜಿಕ ಹಾಗೂ ಕಲಾತ್ಮಕ ಸವಾಲುಗಳನ್ನು ಎದುರಿಸುತ್ತ ಮುಖಾಮುಖಿಯಾಗುವ ಕುತೂಹಲದ ಸನ್ನಿವೇಶವನ್ನು ನಾಟಕ ಯಶಸ್ವಿಯಾಗಿ ಹಿಡಿದಿಡುತ್ತದೆ. ಅನುಭವಗಳನ್ನು ಪ್ರಾಮಾಣಿಕವಾಗಿ, ತಮಾಷೆಯಾಗಿ ಹಾಗೂ ಭಾವನಾತ್ಮಕವಾಗಿ ಕಲಾವಿದರು ಹಿಡಿದಿಡುತ್ತಾರೆ ಎಂದರು.
ಮಹಾರಾಷ್ಟ್ರದ ರಂಗನಟ ಜಾಹ್ನವಿ ಶ್ರೀಮಾಣ್ಕರ್ ಹಾಗೂ ಕೈಲಾಶ್ ವಾಘ್ಮೋರೆ ಅಭಿನಯಿಸುವರು. ರೋಹಿತ್‌ದಾಸ್, ತುಷಾರ್ ಕದಮ್ ಮತ್ತು ಸದಾನಂದ ಮಲಿಕ್ ಸಂಗೀತ ನೀಡುವರು. ಒಂದೂವರೆ ತಾಸಿನ ನಾಟಕ ಇದಾಗಿದೆ. ಮಾಹಿತಿ ಹಾಗೂ ಟಿಕೆಟ್‌ಗೆ ಮೊ. 9448414752 ಸಂಪರ್ಕಿಸುವಂತೆ ತಿಳಿಸಿದರು.
ಪ್ರಮುಖರಾದ ಕಾಂತೇಶ್ ಕದರಮಂಡಲಗಿ, ಚಂದ್ರಯ್ಯ, ಬಿ.ವಿ.ತಿಪ್ಪಣ್ಣ, ಎಚ್.ಸುರೇಶ್, ವಿಶ್ವೇಶ್ವರಯ್ಯ, ಹಾಲಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net