ಸಂಭ್ರಮದ ಶ್ರೀ ಬನದ ಕರೆಮ್ಮದೇವಿ ಜಾತ್ರೆ

web1
Published on

ಕೊಳವಿ: ಗ್ರಾಮದ ಹೊರವಲಯದ ಶ್ರೀ ಬನದ ಕರೆಮ್ಮ ದೇವಿ ಜಾತ್ರಾ ಮಹೋತ್ಸವ ಮಂಗಳವಾರ ಜರುಗಿತು. ಗ್ರಾಮದ ಎಲ್ಲ ದೇವತೆಗಳ ಪಲ್ಲಕ್ಕಿಗಳನ್ನು ಮಂದಿರಕ್ಕೆ ಬರಮಾಡಿಕೊಂಡು ಬೆಳಗ್ಗೆ ದೇವಿಯ ಗದ್ದುಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಪಲ್ಲಕ್ಕಿ ಉತ್ಸವ, ದೇವತೆಗಳಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಡೊಳ್ಳಿನ ಕುಣಿತ ಕಾರ್ಯಕ್ರಮ ಜರುಗಿತು. ಗ್ರಾಮದ ಭಕ್ತಾದಿಗಳು ದೇವಿಗೆ ಅಂಬಲಿ ನೈವೇದ್ಯ ಅರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net