

ಮೈಸೂರು: ರಾಜಲಕ್ಷ್ಮೀ ಎಂಟರ್ಟೈನ್ಮೆಂಟ್ ಬ್ಯಾನರ್‌ನಡಿ ನಿರ್ಮಾಣಗೊಂಡಿರುವ ‘ಸಂಭವಾಮಿ ಯುಗೇ ಯುಗೇ’ ಸಿನಿಮಾ ಜೂ.21 ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ ಹೇಳಿದರು.
ಗ್ರಾಮೀಣ ಹಿನ್ನೆಲೆ ಇರುವ ಯುವಜನರನ್ನು ಈ ಸಿನಿಮಾ ಆಕರ್ಷಿಸುವ ನಿರೀಕ್ಷೆ ಹೊಂದಿದ್ದೇವೆ. ಸಿನಿಮಾ ಜನರಿಗೆ ಉತ್ತಮ ಮನರಂಜನೆ ನೀಡಲಿದೆ. ಚಿತ್ರದಲ್ಲಿ ನಾಲ್ಕು ಹಾಡು ಮತ್ತು ಎರಡು ಸಾಹಸ ದೃಶ್ಯಗಳು ಇವೆ. ನಾಯಕರಾಗಿ ಜಯ್ ಶೆಟ್ಟಿ, ನಿಶಾ ರಜಪೂತ್ ನಾಯಕಿಯಾಗಿ ನಟಿಸಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.