ಹಿಂದು ಧರ್ಮಕ್ಕೆ ಸಂಭಾಜಿ ಮಹಾರಾಜರ ಕೊಡುಗೆ ಅಪಾರ

Sambhaji Maharaj's contribution to Hinduism is immense
ಮುಧೋಳ ನಗರದ ಹೊರವಲಯದಲ್ಲಿ ಮರಾಠ ಸಮಾಜ ವತಿಯಿಂದ ಛತ್ರಪತಿ ಸಂಭಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮ ಜರುಗಿತು. ಆನಂದ ಶಿರಬೂರ, ಆರ್.ಎ. ಘೋರ್ಪಡೆ, ಮಹಾದೇವ ಕೊಡಗ, ವಿಠ್ಠಲ ಘೋರ್ಪಡೆ, ಕೃಷ್ಣ ಕೊಡಗ, ರಾಮಕೃಷ್ಣ ನಿಗಡೆ, ಅರ್ಜುನ್ ಕೊಡಗ ಇದ್ದರು.
Published on

ಮುಧೋಳ: ಹಿಂದು ಧರ್ಮದ ಆಚಾರ- ವಿಚಾರಗಳನ್ನು ಉಳಿಸಿಕೊಳ್ಳುವಲ್ಲಿ ಛತ್ರಪತಿ ಶಿವಾಜಿ ಹಾಗೂ ಸಂಭಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ ಎಂದು ಉಪನ್ಯಾಸಕ ಆನಂದ ಶಿರಬೂರ ಹೇಳಿದರು.

ಪಟ್ಟಣದ ಹೊರ ವಲಯದಲ್ಲಿ ಮರಾಠ ಸಮಾಜ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಛತ್ರಪತಿ ಸಂಬಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸನಾತನ ಧರ್ಮ ಬಿಟ್ಟುಕೊಡದೆ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಮಹಾನುಭಾವರು ಎಂದು ಸಂಭಾಜಿ ಮಹಾರಾಜರ ಇತಿಹಾಸವನ್ನು ವಿವರಿಸಿದರು.

ಸಮಾಜದ ಅಧ್ಯಕ್ಷ ರಾಜೇಶ ಘೋರ್ಪಡೆ ಮಾತನಾಡಿ, ಕಳೆದ ಆರು ದಶಕಗಳಿಂದ ಹಿರಿಯರು ನಮ್ಮ ಸಮಾಜವನ್ನು ಹೆಮ್ಮರವಾಗಿ ಬೆಳೆಸಿದ್ದಾರೆ. ಸಂಭಾಜಿ ಮಹಾರಾಜರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಆರ್.ಎ. ಘೋರ್ಪಡೆ ಅಧ್ಯಕ್ಷತೆ ವಹಿಸಿದ್ದರು. ಮಹಾದೇವ ಕೊಡಗ, ವಿಠ್ಠಲ ಘೋರ್ಪಡೆ, ಕೃಷ್ಣ ಕೊಡಗ, ರಾಮಕೃಷ್ಣ ನಿಗಡೆ, ಅರ್ಜುನ್ ಕೊಡಗ, ವಸಂತ ಕುಡೆ, ಪ್ರಹ್ಲಾದ್ ಕೊಡಗ, ವೆಂಕಟರಾವ ಘೋರ್ಪಡೆ, ರಾಮಕೃಷ್ಣ ಕೊಡಗ, ವೆಂಕಪ್ಪ ಮಂಟೂರ, ರಮೇಶ ನಿಗಡೆ, ವೆಂಕಪ್ಪ ಪವಾರ್, ಪ್ರಕಾಶ ಘೋರ್ಪಡೆ, ಪ್ರಹ್ಲಾದ ಶಿಂಧೆ, ಎಸ್.ಎನ್. ಕೊಡಗ, ಪರಶು ನಿಗಡೆ, ಕಿಶೋರ್ ಘೋರ್ಪಡೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net