

ಸಂಬರಗಿ: ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕಷಿ ಸಹಕಾರ ಸಂಘ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಮಾರ್ಗದರ್ಶನದಲ್ಲಿ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಸಂಘದ ಉಪಾಧ್ಯಕ್ಷ ಅಣ್ಣಾಸಾಹೇಬ ಮಿಸಾಳ ಹೇಳಿದರು.
ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕಷಿ ಸಹಕಾರ ಸಂಘದ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ 59ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು. ಇಲ್ಲಿಯವರೆಗೆ ಸಂಘದ ಸದಸ್ಯರಿಗೆ 5.31 ಕೋಟಿ ರೂ. ಸಾಲ ವಿತರಿಸಿದ್ದೇವೆ. ಸಂಘದ ನಿಗಳು 25.92 ಲಕ್ಷ ರೂ. ಇದ್ದು, ಸಂಘದ ಠೇವು 52.88 ಲಕ್ಷ ರೂ. ಇದೆ. 2022-23 ನೇ ಸಾಲಿನಲ್ಲಿ ಎಲ್ಲ ತರಹದ ಸಾಲಗಳು ಹಾಗೂ ಠೇವುಗಳ ವ್ಯವಹಾರ ಮಾಡಿ ಇತರ ವೆಚ್ಚಗಳನ್ನು ಕಳೆದು 3.38 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದರು.
ಸಂಘದ ಅಧ್ಯಕ್ಷ ವಿಲಾಸ ಟೋಣೆ ಮಾತನಾಡಿ, ನಮ್ಮ ಸಂಘ ಬೆಳೆಯಲು ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ ಬೆನ್ನೆಲುಬಾಗಿ ನಿಂತಿದ್ದು, ಏನೇ ಸಮಸ್ಯೆ ಬಂದರೂ ಪರಿಹರಿಸುತ್ತ ಸಂಘದ ಏಳಿಗೆಗೆ ಕಾರಣರಾಗಿದ್ದಾರೆ ಎಂದರು. ನಿರ್ದೇಶಕರಾದ ತುಕಾರಾಮ ಶೇಳಕೆ, ಪರಶುರಾಮ ನಾಟೇಕರ, ಗೌರಕ್ಕ ಗಸ್ತಿ, ಸಾವಿತ್ರಿ ಅವಳೇಕರ್, ಸುಷ್ಮಾ ದೇವಮಾನೆ, ದೇವಾ ಪವಾರ್, ಧರ್ಮು ನರೋಟೆ, ಅರುಣ ಟೋಣೆ, ಬಳಿ ವಾಯಫಳೆ, ಮುಖಂಡರಾದ ರಾಜು ಪಾಸಲೆ, ಬಂಡು ದೇಶಪಾಂಡೆ, ಅಮತ ಮಿಸಾಳ, ವಿಠ್ಠಲ ಗಸ್ತಿ, ಸರ್ಜೆರಾವ ಮಾನೆ, ಪಾಂಡುರಂಗ ಕೋಳಿ, ದಗಡು ಮಿಸಾಳ, ಸುಖಾ ಕಂಟೇಕರ, ಸಂಘದ ಮುಖ್ಯ ಕಾರ್ಯನಿರ್ವಾಹಕ ಕೊಂಡಿಬಾ ಮಿಸಾಳ ಇತರರು ಇದ್ದರು.