12ರಂದು ನಂಜನಗೂಡಿನಲ್ಲಿ ಜನಜಾಗೃತಿ ಸಮಾವೇಶ

Oplus_131072
Oplus_131072
Published on

 ನಂಜನಗೂಡು : ಭೀಮಾ ಕೊರೆಗಾಂವ್ 207ನೇ ವಿಜಯೋತ್ಸವದ ಅಂಗವಾಗಿ ನಂಜನಗೂಡಿನಲ್ಲಿ ಜ.12 ರಂದು ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಗರ್ಲೆ ಎಂ.ವಿಜಯಕುಮಾರ್ ಹಾಗೂ ಗೌರವಾಧ್ಯಕ್ಷ ಕಾರ್ಯ ಬಸವಣ್ಣ ತಿಳಿಸಿದರು.

ಅಂದು ಬೆಳಗ್ಗೆ 11ಕ್ಕೆ ನಗರದ ಕಿರಿಯ ಕಾಲೇಜು ಮೈದಾನದಿಂದ ಹೊರಡುವ ಮೆರವಣಿಗೆಗೆ ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಚಾಲನೆ ನೀಡಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಉದ್ಘಾಟನೆ ಸಮಾರಂಭದಲ್ಲಿ ಪತ್ರಕರ್ತ ರಮಾಕಾಂತ್, ಚಿಂತಕ ಡಾ.ಎಲ್.ಎನ್.ಮುಕುಂದರಾಜ್, ಅಭಿ ನಾಗಭೂಷಣ್ ಅತಿಥಿಗಳಾಗಿ ಆಗಮಿಸಲಿದ್ದಾರೆ.ಪ್ರಗತಿಪರ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು. ಸಮಾವೇಶದ ಹಿನ್ನೆಲೆಯಲ್ಲಿ ಜ. 1ರ ಬೆಳಗ್ಗೆ 11ಕ್ಕೆ ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ ಅವರು ಕೊರೆಗಾಂವ್ ವಿಜಯೋತ್ಸವ ಜನಜಾಗೃತಿ ರಥಕ್ಕೆ ಚಾಲನೆ ನೀಡಲಿದ್ದಾರೆ. ರಥ ತಾಲೂಕಿನಾದ್ಯಂತ ಸಂಚರಿಸಲಿದೆ ಎಂದು ವಿವರಿಸಿದರು. ಗೋಷ್ಠಿಯಲ್ಲಿ ಸಂಘಟನೆ ಉಪಾಧ್ಯಕ್ಷ ಪುಟ್ಟಸ್ವಾಮಿ, ಜಿಲ್ಲಾ ಸಂಚಾಲಕ ಮಲ್ಲೇಶ್, ಮುಖಂಡರಾದ ಸುರೇಶ್, ಜೈ ಶಂಕರ್, ಯಶ್ವಂತ್ ಕುಮಾರ್, ಪ್ರಶಾಂತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net