ಸಮಾತೆಯ ಹರಿಕಾರ, ಸಮಾಜ ಸುಧಾರಕ

ಹನೂರಿನಲ್ಲಿ ರಾಷ್ಟ್ರೀಯ ಹಬ್ಬಗಳ ಅಚರಣೆ ಸಮಿತಿ ವತಿಯಿಂದ ಬಸವ ಜಯಂತಿಯನ್ನು ಆಚರಿಸಲಾಯಿತು. ತಹಸೀಲ್ದಾರ್ ಗುರುಪ್ರಸಾದ್, ತಾಪಂ ಇಒ ಉಮೇಶ್, ಬಸವರಾಜಪ್ಪ, ಮುರುಡೇಶ್ವರ ಸ್ವಾಮಿ, ಉದ್ದನೂರು ಪ್ರಸಾದ್ ಇತರರು ಇದ್ದರು.
ಹನೂರಿನಲ್ಲಿ ರಾಷ್ಟ್ರೀಯ ಹಬ್ಬಗಳ ಅಚರಣೆ ಸಮಿತಿ ವತಿಯಿಂದ ಬಸವ ಜಯಂತಿಯನ್ನು ಆಚರಿಸಲಾಯಿತು. ತಹಸೀಲ್ದಾರ್ ಗುರುಪ್ರಸಾದ್, ತಾಪಂ ಇಒ ಉಮೇಶ್, ಬಸವರಾಜಪ್ಪ, ಮುರುಡೇಶ್ವರ ಸ್ವಾಮಿ, ಉದ್ದನೂರು ಪ್ರಸಾದ್ ಇತರರು ಇದ್ದರು.
Published on

ಹನೂರು: ಶ್ರೀ ಬಸವೇಶ್ವರರು ಅನುಭವ ಮಂಟಪವನ್ನು ಸ್ಥಾಪಿಸುವುದರ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಎತ್ತಿ ಹಿಡಿದ ಸಮಾಜ ಸುಧಾರಕ ಎಂದು ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ತಿಳಿಸಿದರು.


ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ಧ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಸಮಾಜದಲ್ಲಿ ಅಸ್ಪಶ್ಯತೆ, ಅಸಮಾನತೆ ತಾಂಡವಾಡುತ್ತಿತ್ತು. ಈ ಕಾಲಘಟ್ಟದಲ್ಲಿ ಜನ್ಮ ತಾಳಿದ ಅನೇಕ ಸಮಾಜ ಸುಧಾರಕರಲ್ಲಿ ಬಸವಣ್ಣ ಒಬ್ಬರು. ಇವರು ಸಮಾಜದಲ್ಲಿನ ಅಸಮಾನತೆಯನ್ನು ತೊಡೆದು ಹಾಕಲು ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಸಾಮಾಜಿಕ ಹೋರಾಟಗಾರ. ಸಮಾಜಕ್ಕೆ ಇವರ ಕೊಡುಗೆ ಅಪಾರ. ಇವರು 12ನೇ ಶತಮಾನದಲ್ಲಿಯೇ ಅನುಭವ ಮಂಟಪವನ್ನು ಸ್ಥಾಪಿಸಿ ವಚನಗಳನ್ನು ರಚಿಸುವುದರ ಮೂಲಕ ಸಮಾನತೆಯನ್ನು ತರಲು ಶ್ರಮಿಸಿದ ವಚನಕಾರ. ಇವರ ವಚನಗಳು ಉತ್ತಮ ಸಮಾಜಕ್ಕೆ ಇಂದಿಗೂ ಸ್ಪೂರ್ತಿದಾಯಕವಾಗಿದೆ. ಅಲ್ಲದೇ ಅಂದಿನ ಕಾಲಘಟ್ಟದಲ್ಲೇ ಸ್ತ್ರೀಯರ ಸಮಾನತೆಗೆ ಭದ್ರ ಬುನಾದಿಯನ್ನು ಹಾಕಿದ್ದರು ಎಂದರು.


ತಾಪಂ ಇಒ ಉಮೇಶ್, ಶಿರಸ್ತೆದಾರ್ ನಾಗೇಂದ್ರ, ಆರ್‌ಐ ಮಾದೇಶ್, ಗ್ರಾಮ ಆಡಳಿತ ಅಧಿಕಾರಿಗಳಾದ ಶೇಷಣ್ಣ, ಲೋಕೇಶ್, ಕಾವ್ಯ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಬಸವರಾಜಪ್ಪ, ಶಿಕ್ಷಕ ದೇವರಾಜು, ಮುಖಂಡರಾದ ಮುರುಡೇಶ್ವರಸ್ವಾಮಿ, ವೃಷಭೇಂದ್ರಸ್ವಾಮಿ, ನಾಗರಾಜು, ಉದ್ದನೂರು ಪ್ರಸಾದ್, ಹಾಗೂ ಕಂದಾಯ ಇಲಾಖೆಯ ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net