

ಕುಶಾಲನಗರ: ದಾರುಲ್ ಉಲೂಂ ಹೈಯರ್ ಸೆಕೆಂಡರಿ ಮದರಸದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಸ್ಥಾಪಕ ದಿನವನ್ನು ಆಚರಿಸಲಾಯಿತು.
೧೦೦ ವರುಷದತ್ತ ಹೆಜ್ಜೆ ಹಾಕುತ್ತಿರುವ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಸ್ಥಾಪನಾ ದಿನ ಕುಶಾಲನಗರದ ದಾರುಲ್ ಉಲೂಂ ಹೈಯರ್ ಸೆಕೆಂಡರಿ ಮದರಸದಲ್ಲಿ ಮಹಲ್ ಜಮಾಅತ್ ಅಧ್ಯಕ್ಷ ಎಂ.ಎಂ.ಎಸ್ ಹುಸೈನ್ ಅವರು ಧ್ವಜಾರೋಹಣ ನೆರವೇರಿಸಿದರು. ಮದ್ರಸ ಪ್ರಾಂಶುಪಾಲರಾದ ಎಂ.ತಮ್ಲೀಖ್ ದಾರಿಮಿ ಉದ್ಘಾಟಿಸಿ ಮಾತನಾಡಿ, ವರಕ್ಕಲ್ ಬಾ ಅಲವೀ ಮುಲ್ಲಕೋಯ ತಂಙಳರು ೧೯೨೬ ಜೂ.೨೬ ರಂದು ಸ್ಥಾಪಿಸಿ ಹಲವಾರು ಮಹೋನ್ನತ ಸಾತ್ವಿಕ ನಾಯಕರು ನೇತೃತ್ವ ವಹಿಸಿ ಇದೀಗ ಸೈಯ್ಯಿದುಲ್ ಉಲಮಾ ಮುಹಮ್ಮದ್ ಜಿಫ್ರೀ ತಂಙಳ್ ಅದ್ಯಕ್ಷರಾಗಿ ನೇತೃತ್ವ ವಹಿಸುತ್ತಿರುವ ಪ್ರಪಂಚದೆಲ್ಲೆಡೇ ಸರಿ ಸಾಟಿ ಇಲ್ಲದ ಸಂಘ ಶಕ್ತಿಯಾಗಿದೆ ಸಮಸ್ತ ಎಂದರು.
ಸ್ಥಳೀಯ ಖತೀಬರಾದ ಶಾಫಿ ಫೈಝಿ ಇರ್ಫಾನಿ ಮುಹರ್ರಂ ಸಂದೇಶವನ್ನು ಸಾರಿದರು. ಎಸ್‌ಕೆಎಸ್‌ಬಿವಿ ಸಂಚಾಲಕರಾದ ಯಾಸೀನ್ ಫೈಝಿ ಸಿದ್ದಾಪುರ ಸ್ವಾಗತಿಸಿದರು. ವೇದಿಕೆಯಲ್ಲಿ ಹಂಸ ಹಾಜಿ, ಕಾರ್ಯದರ್ಶಿಗಳಾದ ಅಬ್ದುಲ್ ಮಜೀದ್, ಮುಹಮ್ಮದಲಿ ಸದಸ್ಯರಾದ ಶರೀಫ್.ಎಂ.ವೈ, ಮದ್ರಸ ಅದ್ಯಾಪಕರಾದ ಉನೈಸ್ ಫೈಝಿ, ಅಶ್ರಫ್ ಅಝ್ ಹರಿ, ನಫೀರ್ ಮುಸ್ಲಿಯಾರ್, ರಾಝಿಕ್ ರೆಹ್ಮಾನಿ, ಮುಶ್ತಾಖ್ ದಾರಿಮಿ, ಜಾಬಿರ್ ಅಝ್ ಹರಿ ಇದ್ದರು.
ಎಸ್‌ಬಿವಿ ವ್ಯವಸ್ಥಾಪಕರಾದ ಶಕೀರ್ ಫೈಝಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಎಸ್‌ಕೆಎಸ್‌ಬಿವಿ ಸದಸ್ಯರಾದ ಶಾಹಿದ್ ಮತ್ತು ಅಫ್ರಾಝ್ ಸಮಸ್ತದ ಕಾರ್ಯವೈಖರಿಗಳ ಕುರಿತು ಬಾಷಣ ಮಾಡಿದರು. ಅಮಾನ್ ಮತ್ತು ಜಾಫರ್ ಗಾನ ಆಲಾಪಿಸಿದರು. ಕೊನೆಗೆ ಕಾರ್ಯದರ್ಶಿ ನಿಹಾಲ್ ವಂದಿಸಿದರು.