ಸಮರ್ಥ ಕನ್ನಡಿಗರು ಸಂಘಟನೆಯಿoದ ಸಾಧಕರಿಗೆ ಪ್ರಶಸಿ ಪ್ರದಾನ

samartha
Published on

ಮಡಿಕೇರಿ:

ಸಮರ್ಥ ಕನ್ನಡಿಗರು ಸಂಸ್ಥೆಯು ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡುವ ವಾರ್ಷಿಕ ಪ್ರಶಸ್ತಿಯನ್ನು ಹಿರಿಯ ಲೇಖಕಿ ರಾಜಲಕ್ಷಿö್ಮÃ ಗೋಪಾಲಕೃಷ್ಣ ಸನ್ಮಾನಿತರಿಗೆ ಗೌರಪಾವರ್ಪಣೆ ಮೂಲಕ ವಿತರಿಸಿದರು. ನಗರದ ಓಂಕಾರ ಸದನದಲ್ಲಿ ಭಾನುವಾರ ಆಯೋಜಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 11 ಸಾಧಕರಿಗೆ ಸಮರ್ಥ ಕನ್ನಡಿಗ ಪ್ರಶಸ್ತಿ ವಿತರಿಸಿ ಮಾತನಾಡಿದ ರಾಜಲಕ್ಷಿö್ಮÃ ಗೋಪಾಲಕೃಷ್ಣ, ವಿವಿಧ ರಂಗದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯ ಶ್ಲಾಘನೀಯ. ಇಂಥ ಪ್ರಶಸ್ತಿ, ಸನ್ಮಾನಗಳು ಸಾಧಕರಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಗೆ ಪ್ರೇರಣೆಯಾಗುತ್ತದೆ ಎಂದರು.

ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಕರ್ನಾಟಕಕ್ಕೆ ರಾಜ್ಯದ ಸ್ಥಾನ ದೊರಕಿ 68 ವರ್ಷಗಳೇ ಕಳೆದರೂ ಕನ್ನಡ ಸಾಹಿತ್ಯ ಸಂಸ್ಕೃತಿಗಾಗಿನ ಹೋರಾಟಗಳು ಅಂತ್ಯಕಾಣುತ್ತಿಲ್ಲ, ಬದಲಿಗೆ ದಿನೇ ದಿನೇ ಪರಭಾಷೆಯ ಸವಾರಿ ಕನ್ನಡದ ಮೇಲೆ ಹೆಚ್ಚುತ್ತಲೇ ಇದೆ, ಬಾಲ್ಯದಲ್ಲಿಯೇ ಸಂಸ್ಕಾರದ ಜತೆಜತೆಗೇ ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಪ್ರೇಮವನ್ನು ಕಲಿಸಿದರೆ ಕನ್ನಡ ಎಂದೆAದಿಗೂ ಚಿರನೂತನವಾಗಿ ಉಳಿಯುತ್ತದೆ.

ಕೋವಿಡ್ ಲಾಕ್ ಡೌನ್ ಸಂದರ್ಭ ಮಕ್ಕಳಿಗೆ ಮೊಬೈಲ್ ಮೂಲಕ ಪಾಠ ಹೇಳಿದ್ದೇ ತಪ್ಪಾದಂತಿದೆ, ಲಸಿಕೆಯ ಅಡ್ಡಪರಿಣಾಮಗಳ ಜತೆಗೇ ಮಕ್ಕಳಲ್ಲಿ ಮೊಬೈಲ್ ಚಟದ ಅಡ್ಡಪರಿಣಾಮ ಸಾಕಷ್ಟು ಅಪಾಯವನ್ನು ತಂದೊಡ್ಡುತ್ತಿದೆ. ಹಿರಿಯರಿಗೆ ಗೌರವ ಕೊಡುವ ಸಂಸ್ಕೃತಿಯನ್ನೇ ಮಕ್ಕಳು ಮರೆಯುತ್ತಾ ಮೊಬೈಲ್ ಲೋಕದಲ್ಲಿ ವಿಹರಿಸುತ್ತಾ ತಮ್ಮದೇ ಪ್ರಪಂಚ ಸೃಷ್ಟಿಸಿಕೊಂಡು ಬಿಟ್ಟಿದ್ದಾರೆ. ಪೋಷಕರ ಮಾತೂ ಸಹಿಸಲಾಗದ ದುಸ್ಥಿತಿಗೆ ಅನೇಕ ಮಕ್ಕಳು ತಲುಪಿರುವುದು ನವ ತಂತ್ರಜ್ಞಾನದ ಕೊಡುಗೆಯಾಗಿದೆ. ಇಂಥ ಸ್ಥಿತಿಯಿಂದ ಮಕ್ಕಳನ್ನು ಹೊರತಂದು ಸಾಹಿತ್ಯಾಭಿರುಚಿ ಮೂಡಿಸುವ ಪ್ರಯತ್ನ ಕೂಡಲೇ ಆಗಲೇಬೇಕಿದೆ ಎಂದರು.

ಸಮರ್ಥ ಕನ್ನಡಿಗರು ಸಂಸ್ಥೆಯ ರಾಜ್ಯ ಪ್ರಧಾನ ಸಂಚಾಲಕ ಆನಂದ್ ದೆಗ್ಗನಹಳ್ಳಿ ಮಾತನಾಡಿ, ಬೇರೆ ಬೇರೆ ವೃತ್ತಿಯಲ್ಲಿರುವ ಕನ್ನಡಾಭಿಮಾನಿಗಳು ಸೇರಿಕೊಂಡು 14 ವರ್ಷದ ಹಿಂದೆ ಪ್ರಾರಂಭಿಸಿದ ಸಮರ್ಥ ಕನ್ನಡಿಗರು ಸಂಸ್ಥೆ ಇಂದು ಕೊಡಗು ಸೇರಿದಂತೆ ರಾಜ್ಯವ್ಯಾಪಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಸಾಂಸ್ಕೃತಿಕ ವೇದಿಕೆಯನ್ನು ಪ್ರತಿಭಾವಂತರಿಗೆ ನೀಡುತ್ತಾ ಬಂದಿದೆ ಎಂದರು.

ಮಡಿಕೇರಿ ಜೀವವಿಮಾ ನಿಗಮದ ಶಾಖಾಧಿಕಾರಿ ದೀಪಕ್ ಕುಮಾರ್ ಸುರ ಮಾತನಾಡಿ, ಕನ್ನಡ ಭಾಷೆಯನ್ನು ಕಲಿಯುವುದು ಸುಲಭವಾಗಿದ್ದು ಪರಭಾಷಿಕರೂ ಸುಲಭವಾಗಿ ಕನ್ನಡ ಕಲಿತು ಸಾಹಿತ್ಯ ಪ್ರೇಮಿಗಳಾಗಬೇಕೆಂದರು.

ಸಮರ್ಥ ಕನ್ನಡಿಗರು ಸಂಸ್ಥೆಯ ಸಂಸ್ಥಾಪಕ ಲಿಂಗೇಶ್ ಹುಣಸೂರು, ಕೊಡಗು ಜಿಲ್ಲಾ ಸಂಚಾಲಕಿ ಕೆ. ಜಯಲಕ್ಷಿö್ಮÃ, ಹೇಮಂತ್ ಹೊಸೂರು, ಚೆರಿಯಮನೆ ಗಾಯತ್ರಿ,ಕಡ್ಲೇರ ತುಳಸಿ ಇದ್ದರು.

ಸಮರ್ಥ ಕನ್ನಡಿಗರು ಸಂಸ್ಥೆಯಿAದ ವಾರ್ಷಿಕ ಸನ್ಮಾನಕ್ಕೆ ಭಾಜನರಾದವರು:

ಟಿ.ಪಿ ರಮೇಶ್, ಮಡಿಕೇರಿ ( ಸಾಹಿತ್ಯ ಸಂಘಟನೆ), ಕುಂಡ್ಯೊಳAಡ ದಿನೇಶ್ ಕಾರ್ಯಪ್ಪ, ನಾಪೋಕ್ಲು (ಕ್ರೀಡಾ ಸಂಘಟನೆ), ಆರ್.ಕೆ. ಬಾಲಚಂದ್ರ, ಕುಶಾಲನಗರ (ಕನ್ನಡದಲ್ಲಿ ಬ್ಯಾಂಕಿAಗ್ ಮಾರ್ಗದರ್ಶನ), ಅರುಣ್ ಶೆಟ್ಟಿ, ಮಡಿಕೇರಿ (ಸಮಾಜಸೇವೆ), ತೇಲಪಂಡ ಆರತಿ ಸೋಮಯ್ಯ, ಸ್ವಸ್ಥ ಶಿಕ್ಷಣ ಸಂಸ್ಥೆಮ ಸುಂಟಿಕೊಪ್ಪ (ಶಿಕ್ಷಣ), ನಿಖಿಲ್ ರಾಮಮೂರ್ತಿ, ವಿರಾಜಪೇಟೆ ( ಬಿದಿರು ಕೃಷಿ), ಚಿತ್ರಾ ಆರ್ಯನ್ ಮಡಿಕೇರಿ (ಸಂಗೀತ), ಸಂಗೀತ ರವಿರಾಜ್, ಸಂಪಾಜೆ (ಸಾಹಿತ್ಯ), ಎಸ್. ಕೆ. ಲಕ್ಷ್ಮೀಶ್, ಮಡಿಕೇರಿ (ಮಾಧ್ಯಮ), ಓಬಳೇಶ್ವರ, ಮಡಿಕೇರಿ (ಪೌರಸೇವೆ) ಬೆಂಗಳೂರಿನ ಲಕ್ಷಿö್ಮÃ ಲಿಂಗೇಶ್ (ಸಮಾಜಮುಖಿ ಕಾರ್ಯ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net