

ಅಣ್ಣಿಗೇರಿ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಹಾಗೂ ಗೋವಾ ಕ್ರೀಡಾ ಪ್ರಾಧಿಕಾರವು ಗೋವಾದಲ್ಲಿ ಆಯೋಜಿಸಿದ್ದ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಕ್ವಾಯ್ (ಸಮರ ಕಲೆ) ವೈಯಕ್ತಿಕ ವಿಭಾಗದಲ್ಲಿ ಧಾರವಾಡ ಜಿಲ್ಲೆ ಅಣ್ಣಿಗೇರಿಯ ಗಣೇಶ ವೀ. ಶಾನುಭೋಗರ ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದಾರೆ.
50 ಕೆಜಿ ಒಳಗಿನ ಸ್ಪಧಿರ್ಗಳ ವಿಭಾಗದಲ್ಲಿ ರಾಜಸ್ಥಾನ ಸ್ಪಧಿರ್ಯನ್ನು 2 ಅಂಕದಿಂದ ಸೋಲಿಸಿ ಗಣೇಶ ಗೆಲುವು ತಮ್ಮದಾಗಿಸಿಕೊಂಡರು. ಮುಂದಿನ ಹಂತದಲ್ಲಿ ಆಂಧ್ರಪ್ರದೇಶ ಸ್ಪಧಿರ್ಯ ವಿರುದ್ಧ ಸಮಬಲ ಸ್ಪರ್ಧೆ ನೀಡಿದರೂ ಅನಿವಾರ್ಯವಾಗಿ ಕಂಚಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಕಾಶ್ಮೀರದಲ್ಲಿ ಹುಟ್ಟಿದ ಸ್ಕ್ವಾಯ್ ಸಮರಕಲೆ ಕುರಿತು ಭಾರತೀಯ ಸ್ಕ್ವಾಯ್ ಅಸೋಸಿಯೇಷನ್ ಜಮ್ಮುವಿನಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, ಏಕ್ ಭಾರತ ಶ್ರೇಷ್ಠ ಭಾರತ ಯೋಜನೆ ಅಡಿ ಹರಿಯಾಣದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಇವರು ಕಂಚಿನ ಪದಕ ಪಡೆದಿದ್ದರು.
ಈಗ ಮತ್ತೆ ಗೆಲುವಿನ ಓಟ ಮುಂದುವರಿಸಿ ಕರ್ನಾಟಕಕ್ಕೆ ಕಂಚಿನ ಪದಕ ತಂದು ಕೊಟ್ಟಿದ್ದಾರೆ.
ಅಣ್ಣಿಗೇರಿಯ ಧಾರವಾಡ ಜಿಲ್ಲಾ ಸ್ಕ್ವಾಯ್ ಅಸೋಸಿಯೇಷನ್ ಹಾಗೂ ಗೋಲ್ಡನ್ ಕರಾಟೆ ಕ್ಲಬ್ನ ಗುರು, ತರಬೇತುದಾರ ಗಣೇಶ ಇಳಕಲ್, ಕ್ರೀಡಾ ಇಲಾಖೆ ಸ್ಕ್ವಾಯ್ ವಿಭಾಗದ ಕಾರ್ಯದಶಿರ್ ಮಹಮ್ಮದ್ ಅಲಿ, ಸ್ಕ್ವಾಯ್ ಅಸೋಸಿಯೇಷನ್ ಫೆಡರೇಶನ್ ಗ್ರಾ$ಂಡ್ ಮಾಸ್ಟರ್ ಮೀರ್ ನಜೀರ್, ಸ್ಕ್ವಾಯ್ ಹಾಗೂ ಕರಾಟೆ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ನಾಯಕ ಮತ್ತು ಸಿ.ಜಿ. ನಾವಳ್ಳಿ ಹರ್ಷ ವ್ಯಕ್ತಪಡಿಸಿದ್ದಾರೆ.
ಗಣೇಶ ಅವರು ಹಿರಿಯ ಪತ್ರಕರ್ತ ವೀರೇಶ ಶಾನುಭೋಗರ ಪುತ್ರರಾಗಿದ್ದಾರೆ.