

ಮೈಸೂರು: ರಂಗಾಯಣದ ವತಿಯಿಂದ ‘ಸಮರಸವೇ ಜೀವನ’ ಆಶಯದ ಚಿಣ್ಣರ ಮೇಳ-2024ರ ಮಕ್ಕಳ ನಾಟಕೋತ್ಸವ ಗುರುವಾರದಿಂದ ಆರಂಭಗೊಂಡಿದ್ದು, ಮೇ 6 ರವರೆಗೆ ಪ್ರತಿದಿನ ಸಂಜೆ 6.30 ಗಂಟೆಗೆ ರಂಗಾಯಣದ ಅಂಗಳದ ವನರಂಗದಲ್ಲಿ ನಡೆಯಲಿದೆ.
3 ರಂದು ಸಫ್ದರ್ ಹಶ್ಮಿ ರಚನೆಯ ‘ಕಿತ್ತಳೆ ಕೆಂಪು ಹೂ’ ಹಾಗೂ ಕುವೆಂಪು ರಚನೆಯ ‘ಪಪ್ಪಾಯ ಕುಂಭಕರ್ಣನೆಬ್ಬಿಸಿ’ ನಾಟಕಗಳ ಪ್ರದರ್ಶನ ನಡೆಯಲಿದೆ.
4 ರಂದು ಮಚ್ಚಿಮಲೆ ಶಂಕರ ನಾರಾಯಣ ಅವರ ‘ನೇರಳೆ ಮಂಗಗಳ ಉಪವಾಸ’ ಹಾಗೂ ಬಿ.ವಿ.ಕಾರಂತ ರಚನೆಯ ‘ಕರ್ಬೂಜ ಪಂಜರಶಾಲೆ’ ನಾಟಕ ಪ್ರದರ್ಶನ ನಡೆಯಲಿದೆ. 5 ರಂದು ಕುವೆಂಪು ರಚನೆಯ ‘ಹಲಸು ನನ್ನ ಗೋಪಾಲ’ ಹಾಗೂ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ರಚನೆಯ ‘ಅಂಜೂರ ನಿದ್ರಾನಗರಿ’ ನಾಟಕ ಪ್ರದರ್ಶನ ನಡೆಯಲಿದೆ. 6 ರಂದು ಎಸ್.ರಾಮನಾಥ ಅವರ ‘ದಾಳಿಂಬೆ ಮಾಯಾದೀಪ’ ಹಾಗೂ ‘ಪೇರಳೆ ರಹೀಮ’ ನಾಟಕ ಪ್ರದರ್ಶನ ನಡೆಯಲಿದೆ.