'ಸಮನ್ವಯ' ೨೦೨೩ರ ಲಾಂಛನ ಅನಾವರಣ

13mdk13
Published on

ಮಡಿಕೇರಿ:

ಇಲ್ಲಿನ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು ಸ್ನಾತಕೋತ್ತರ ಪದವಿ ವಿಭಾಗದ ’ಸಮನ್ವಯ’ ೨೦೨೩ ರ ಲಾಂಛನ ಅನಾವರಣದ ಕಾರ್ಯಕ್ರಮ ಸೋಮವಾರ ನಡೆಯಿತು. ನಾಸಿಕ್ ಬ್ಯಾಂಡ್ ಹಿಮ್ಮೇಳದಲ್ಲಿ ಸಂಸ್ಥೆಯ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮ ನೆರವೇರಿಸಿದರಯ. ಪ್ರಾಂಶುಪಾಲ ಮೇ. ರಾಘವ, ಕಾರ್ಯಕ್ರಮ ಸಂಚಾಲಕಿ ಡಾ. ಗಾಯಿತ್ರಿ ದೇವಿ, ಸಹಸಂಚಾಲಕಿ ಡಾ. ರೇಣುಶ್ರೀ ಹಾಗೂ ವಿವಿಧ ಸ್ನಾತಕೋತರ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಈ ವೇಳೆ ಇದ್ದರು.

ಜೂ. ೨೪ರಂದು ರಾಜ್ಯ ಮಟ್ಟದ ಅಂತರ ಕಾಲೇಜು ’ಸಮನ್ವಯ ೨೦೨೩’ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಕರ್ನಾಟಕದ ಇತಿಹಾಸವನ್ನು ಪ್ರಸ್ತುತಪಡಿಸಲಾಗುತ್ತಿದ್ದು ರಾಜ ಮನೆತನಗಳ ಗೌರವಸೂಚಕವಾಗಿ ಮೈಸೂರು ಒಡೆಯರು, ವಿಜಯನಗರ ಸಾಮ್ರಾಜ್ಯ, ಬಹುಮನಿ ಸುಲ್ತಾನರು, ಹೊಯ್ಸಳ, ರಾಷ್ಟ್ರಕೂಟರು, ಚಿತ್ರದುರ್ಗದ ನಾಯಕರು, ಬಹುಮನಿ ಸುಲ್ತಾನರು ಹಾಗೂ ಕೊಡಗಿನ ಹಾಲೇರಿ ಅರಸರುನ್ನು ಕಾರ್ಯಕ್ರಮದಲ್ಲಿ ಪ್ರತಿಬಿಂಬಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net