ಅತ್ಯುತ್ತಮ ಶಿಕ್ಷಕರು, ಶಾಲೆಗಳಿಗೆ ಸಮಾಜಮುಖಿ ಪ್ರಶಸ್ತಿ

dvd vinod
ವಿನೋದ್
Published on

ದೇವದುರ್ಗ: ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಟ್ಟಲು ಶ್ರಮಿಸುತ್ತಿರುವ ಶಿಕ್ಷಕರು ಹಾಗೂ ಶಾಲೆಗಳನ್ನು ಗುರುತಿಸಿ ಸಮಾಜಮುಖಿ ಪ್ರಶಸ್ತಿ ನೀಡಲಾಗುತ್ತಿದ್ದು, 17ಶಿಕ್ಷಕರು ಹಾಗೂ 9 ಶಾಲೆಗಳು ಆಯ್ಕೆ ಮಾಡಲಾಗಿದೆ ಎಂದು ಮಲದಕಲ್ ಗೆಳೆಯರ ಬಳಗದ ಉಪಾಧ್ಯಕ್ಷ ವಿನೋದ್ ನಾಯಕ ಹಿರೇಬೂದೂರು ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಲದಕಲ್ ಗೆಳೆಯರ ಬಳಗ ಹಾಗೂ ಜ್ಞಾನವೃಕ್ಷ ಶಿಕ್ಷಣ ಮತ್ತು ಸಾಮಾಜಿಕ ಸೇವಾ ಟ್ರಸ್ಟ್‌ನಿಂದ ಸೆ.7ರಂದು ಮಾನಸಗಲ್ ಶ್ರೀಲಕ್ಷ್ಮೀ ರಂಗನಾಥ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಅರ್ಚಕ ನಿಜಲಿಂಗಪ್ಪ ಸ್ವಾಮೀಜಿ, ನಿಜಾನಂದ ಯೋಗಾಶ್ರಮದ ಗುರುಬಸವ ರಾಜಗುರು ಸಾನ್ನಿಧ್ಯ ವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.

ವಲಯ ಸಂಪನ್ಮೂಲ ವ್ಯಕ್ತಿ ಶ್ರೀಶೈಲ ತಳವಾರ, ವಿವಿಧ ಶಾಲೆಗಳ ಶಿಕ್ಷಕರಾದ ರಾಮಪ್ಪ, ಮಮತಾ ಆದಿ, ಶೋಭಾ ನಾಯಕ, ಅಮರೇಶ, ಪಂಪಾದೇವ, ಲತಾ, ಮಹಾಂತೇಶ, ಶಂಭುಲಿಂಗಪ್ಪ ಬಳಿಗಾರ, ಸಾಜೀದಾ ಬೇಗಂ, ಮಂಜುಳಾ ಸಿ.ಎನ್., ರೇವಣಸಿದ್ದಯ್ಯ ಪಂಜಿನ ಪೂಜಾರಿ, ಶಿವರಾಜ, ಬಸವರಾಜ ಯಾಟಗಲ್, ಕವಿತಾ, ಪ್ರವೀಣ್‌ಕುಮಾರ ಭಂಡಾರಿ, ಹನುಮೇಶ ಹಾಗೂ ಅಗ್ರಹಾರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗೋಪಳಾಪುರ ಸರ್ಕಾರಿ ಹಿಪ್ರಾ ಶಾಲೆ, ಶಿವಂಗಿ ಸರ್ಕಾರಿ ಪ್ರೌಢಶಾಲೆ, ಗಬ್ಬೂರು ಮುರಾರ್ಜಿ ದೇಸಾಯಿ ವಸತಿ ಶಾಲೆ, ಹಿರೇಬೂದೂರು ಚಂದನ ಕಿರಿಯ ಪ್ರಾಥಮಿಕ ಶಾಲೆ, ದೇವದುರ್ಗದ ರೆಹಮಾನಿಯಾ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆ, ವಾಗ್ದೇವಿ ಪ್ರೌಢ ವಿದ್ಯಾಮಂದಿರ, ದೇವರಗುಡ್ಡದ ಶ್ರೀಶರಣ ಅಮಾತೇಶ್ವರ ಪ್ರೌಢಶಾಲೆಗೆ 2025-26ನೇ ಸಾಲಿನ ಸಮಾಜಮುಖಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಮುಖಂಡರಾದ ನಾಗರಾಜ ಪೂಜಾರಿ ಮಾನಸಗಲ್, ಪ್ರಭು ಕಾಟಮಳ್ಳಿ, ಬುದ್ದಯ್ಯ ಗಲಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net