ನಾಗೇಂದ್ರ ವೆರ್ಣೇಕರ್ ಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ

Samaj Seva Ratna award to Nagendra Vernekar
Published on

ಕಾರವಾರ: ಪ್ರಶಸ್ತಿಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಸಾಮಾಜಿಕ ಕಾರ್ಯಗಳನ್ನು ಮಾಡಲು ಪ್ರೇರಣೆ ನೀಡುತ್ತವೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಕಾರಿ ಉಮೇಶ ವೈ.ಕೆ.ಹೇಳಿದರು.
ಕರ್ನಾಟಕ ರಾಜ್ಯ ಪ.ಪಂಗಡ ನೌಕರರ ಸಂಘದ ಜಿಲ್ಲಾ ಘಟಕದಿಂದ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಯಮಿ ನಾಗೇಂದ್ರ ವೆರ್ಣೇಕರ್ ಅವರಿಗೆ `ಸಮಾಜ ಸೇವಾ ರತ್ನ' ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ವೆರ್ಣೇಕರ್ ಅವರ ಸಮಾಜ ಸೇವೆ ಗುರುತಿಸಿ ಪ್ರಶಸ್ತಿ ನೀಡಿರುವದು ಪ್ರಸಂಶನಾರ್ಹವಾಗಿದೆ. ಮುಂದೆಯೂ ಉತ್ಕೃಷ್ಟ ಕಾರ್ಯಗಳನ್ನು ಅವರು ಮಾಡಲಿ ಎಂದು ಹಾರೈಸಿದರು.
ಉದ್ಯಮಿ ನರೇಂದ್ರ ದೇಸಾಯಿ ಮಾತನಾಡಿ, ಹುಟ್ಟಿದ ಮೇಲೆ ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬನ ಕರ್ತವ್ಯ ಎಂದರು. ಇನ್ನೊಬ್ಬ ಉದ್ಯಮಿ ಇಬ್ರಾಹಿಂ ಕಲ್ಲೂರು, ವ್ಯಕ್ತಿತ್ವ ರೂಪಗೊಳ್ಳುವದು ನಾವು ಬದುಕುವ ರೀತಿಯಿಂದ,ಸೇವೆ ಅನ್ನುವುದು ಎಲ್ಲರಲ್ಲೂ ಇರುವುದಿಲ್ಲ ಎಂದರು.
ಪ್ರಶಸ್ತಿ ಸ್ವೀಕರಿಸಿದ ನಾಗೇಂದ್ರ ವೆರ್ಣೇಕರ್, ಪ್ರಶಸ್ತಿಯಿಂದ ಸೇವೆಯ ಜವಾಬ್ದಾರಿ ಹೆಚ್ಚಿದೆ. ಮುಂದೆ ಅಸ್ನೋಟಿ ಶಾಲೆಗೆ, ಸಮಾಜಕ್ಕೆ ಉಪಯುಕ್ತ ಸೇವೆ ಒದಗಿಸುತ್ತೇನೆ ಎಂದರು. ದೈವಜ್ಞ ಕೋ ಆಪರೇಟಿವ್ ಸೊಸಾಯಿಟಿ ಅಧ್ಯಕ್ಷರಾದ ನಂದನ ನೀಲಾವರ, ಗೋಕರ್ಣ ಭದ್ರಕಾಳಿ ಪ್ರೌಢಶಾಲೆ ಮುಖ್ಯಾಧ್ಯಪಕರಾದ ಸಿ ಜಿ ನಾಯಕದೊರೆ, ಅಸ್ನೋಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಂಜಯ ಸಾಳುಂಕೆ ಅಧ್ಯಕ್ಷತೆ ವಹಿಸಿದ್ದರು. ರಾಮಕೃಷ್ಣಾಶ್ರಮದ ಭವೇಶಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಹಟ್ಟಿಕೇರಿ ಉಪವಲಯದ ಡಿಆರ್‌ಎಫ್‌ಒ ಭರತೇಶ ವಾಲ್ಮೀಕಿ, ಕೆಎಸ್‌ಎಫ್‌ಸಿ ಉಪವ್ಯವಸ್ಥಾಪಕ ಪ್ರಕಾಶ ಒ.ಪ.ಪಂಗಡ ಹಿತರಕ್ಷಣಾ ಸಂಘದ ಅಧ್ಯಕ್ಷ ನಾಗರಾಜ ತಳವಾರ ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷೆ ಅಶ್ವಿನಿ ಮ್ಹಾಳ್ಸೇಕರ್,ಸಾಮಾಜಿಕ ಕಾರ್ಯಕರ್ತ ವಿಠ್ಠಲ ಪಿ. ನಾಯಕ, ಶಿಕ್ಷಕರಾದ ವ್ಹಿ.ಜಿ.ನಾಯ್ಕ,ಶರದ ಗಾಂವಕರ,ರೂಪಾಲಿ ಸಾವಂತ, ಮುಡಗೇರಿ ಗ್ರಾಪಂ ಅಧ್ಯಕ್ಷ ಸುರೇಂದ್ರ ಗಾಂವಕರ್, ಸದಸ್ಯ ನಂದಕಿಶೋರ ನಾಯ್ಕ, ಕಿಶೋರ ವೇರ್ಣೇಕರ್, ಪುರುಷೋತ್ತಮ ನಾಯ್ಕ,ರಾಜೇಂದ್ರ ವೇರ್ಣೇಕರ್,ಉಪನ್ಯಾಸಕಿ ಜಯಶೀಲಾ ಓಲೇಕಾರ್, ರತ್ಮಾ ವಾಲ್ಮೀಕಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯಾಧ್ಯಪಕ ದಿನೇಶ ಗಾಂವಕರ್ ವಂದಿಸಿದರು. ಗಣೇಶ ಬಿಷ್ಠಣ್ಣನವರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net