ದೀಪಕ್‌ಗೆ ಸಮಾಜ ರತ್ನ ಪ್ರಶಸ್ತಿ

New Project (3)
Published on

ಬೆಳ್ತಂಗಡಿ: ಶ್ರೀ ಜ್ಞಾನ ಮಂದಾರ ಟ್ರಸ್ಟ್ ಬೆಂಗಳೂರು, ಶ್ರೀ ಸಾಯಿರಾಮನ್ ನೃತ್ಯ ಕೇಂದ್ರ ತುಮಕೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು ಸಹಕಾರದಲ್ಲಿ ನ.24ರಂದು ತುಮಕೂರಿನಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ-2024 ವಿವಿಧ ಕ್ಷೇತ್ರದ ಗಣ್ಯರಿಗೆ ಮತ್ತು ಜಿಲ್ಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್‌ನ ಅಧ್ಯಕ್ಷ ದೀಪಕ್ ಜಿ.ಅವರಿಗೆ ಸಮಾಜ ರತ್ನ ಪ್ರಶಸ್ತಿ ಲಭಿಸಲಿದೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಂಟು ಮಂದಿ ಸಾಧಕರಿಗೆ ಸಮಾಜ ರತ್ನ ಪ್ರಶಸ್ತಿ ಲಭಿಸಲಿದ್ದು, ದೀಪಕ್ ಜಿ.ಅವರಿಗೆ ಸಮಾಜ ಸೇವೆಯಲ್ಲಿ ಈ ಪ್ರಶಸ್ತಿ ಲಭಿಸಲಿದೆ. ದೀಪಕ್ ಹಲವಾರು ವಷರ್ಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದು ಬಾಟಲಿಯಲ್ಲಿ ನೀರು ಮಾರಿ ಅದರ ಉಳಿಕೆ ಹಣವನ್ನು ಬಡ ರೋಗಿಗಳಿಗೆ ನೆರವು, ಬಡಕುಟುಂಬಗಳಿಗೆ ಮನೆ ನಿರ್ಮಾಣ, ಉಚಿತ ವೈದ್ಯಕೀಯ ಶಿಬಿರ, ಸರ್ಕಾರಿ ಆಸ್ಪತ್ರೆಗಳ ಸ್ವಚ್ಚತೆ, ಸರ್ಕಾರಿ ಶಾಲೆಗಳ ಶೌಚಗೃಹ ಸ್ವಚ್ಛತಾ ಆಂದೋಲನ, ದುರಸ್ತಿ, ವಿಶೇಷ ಚೇತನರಿಗೆ ವೀಲ್‌ಚೆಯರ್ ಕೊಡುಗೆ, ಕರೋನ ಸೇನಾನಿ ಆಗಿ ಸೇವೆ, ವೃದ್ಧಾಶ್ರಮಗಳಿಗೆ ನೆರವು, ಕ್ರೀಡಾಕೂಟಗಳ ಅಯೋಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಅಯೋಜನೆ ಇನ್ನಿತರ ಹತ್ತು ಹಲವು ಸೇವೆಗಳಲ್ಕಿ ತೊಡಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net