ಹದಗೆಟ್ಟ ರಸ್ತೆ ದುರಸ್ಥಿಪಡಿಸಲು ಸಮಾಜ ಪರಿವರ್ತನ ಸಂಘ ಒತ್ತಾಯ

30 ckm 6
ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ಸಮಾಜ ಪರಿವರ್ತನ ಸಂಘದ ಮುಖಂಡರುಗಳು ಮಾಣಿಕ್ಯ ಧಾರಕ್ಕೆ ಸಾಗುವ ರಸ್ತೆಯು ತೀವ್ರ ಹದಗೆಟ್ಟಿರುವ ಪರಿ ಣಾಮ ಕೂಡಲೇ ದುರಸ್ಥಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಆರ್.ಶ್ರೀನಿವಾಸ್, ಜಗದೀಶ್ ಕೋಟೆ, ಅಬ್ದುಲ್ ಕರೀಂ ಇದ್ದರು.
Published on

ಚಿಕ್ಕಮಗಳೂರು: ಮಾಣಿಕ್ಯ ಧಾರಕ್ಕೆ ಸಾಗುವ ರಸ್ತೆಯು ತೀವ್ರ ಹದಗೆಟ್ಟಿರುವ ಪರಿ ಣಾಮ ಕೂಡಲೇ ದುರಸ್ಥಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಮಾಜ ಪರಿವರ್ತನ ಸಂಘದ ಮುಖಂಡರುಗಳು ಮಂಗಳವಾರ ಡಿಸಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್, ಗಿರಿಪ್ರದೇಶದ ಮಾಣಿಕ್ಯಧಾರಕ್ಕೆ ಸಾಗುವ ರಸ್ತೆ ಬಹಳಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಕೆಲ ದಿನದ ಹಿಂದೆ ಬಸ್‌ವೊಂದು ಉರುಳಿ ಓರ್ವ ಬಾಲಕ ಮೃತಪಟ್ಟಿದ್ದು. ಸುಮಾರು ೨೫ ಮಂದಿ ಗಾಯಾಳುಗಳಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ರಸ್ತೆಯನ್ನು ಅಚ್ಚುಕಟ್ಟುಗೊಳಿಸಿದರೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.
ಶ್ರೀ ಗುರುದತ್ತಾತ್ರೇಯಸ್ವಾಮಿ ಬಾಬಾಬುಡನ್ ದರ್ಗಾದಿಂದ ಮಾಣಿಕ್ಯಧಾರಕ್ಕೆ ಕನಿಷ್ಟ ೩ ಕಿ.ಮೀ.ಗಳ ಅಂತರವಿದೆ. ಈ ಪೈಕಿ ಒಂದು ಕಿ.ಮೀ.ಗೆ ಮಾತ್ರ ಕಾಂಕ್ರೀಟೀಕರಣ ಮಾಡಿರುವುದಿಲ್ಲ. ಈ ೧ ಕಿ.ಮೀ. ಅಂತರ ದಲ್ಲಿ ತೀವ್ರ ತರದ ಗುಂಡಿಗಳಿದ್ದು ಈಚೆಗೆ ನಡೆದ ಬಸ್ ಅಪಘಾತಕ್ಕೆ ಈ ರಸ್ತೆಯೇ ಪ್ರಮುಖ ಕಾರಣ ವಾಗಿದೆ ಎಂದು ಹೇಳಿದರು.
ಉಳಿದಿರುವ ಒಂದು ಕಿ.ಮೀ. ರಸ್ತೆಯನ್ನು ಕಾಂಕ್ರೀಟೀಕರಣ ಮಾಡಲು ಕಾಣದ ಕೈಗಳು ತಡೆಯೊಡ್ಡಿವೆ. ಮಾಣಿಕ್ಯ ಧಾರಕ್ಕೆ ಹೋಗುವ ಪ್ರವಾಸಿಗರನ್ನು ಲಂಗುಲಗಾಮಿಲ್ಲದೇ ಖಾಸಗೀ ಜೀಪ್‌ಗಳಲ್ಲೇ ಭದ್ರತೆ ಯಿಲ್ಲದೇ ಪ್ರಯಾಣಿಸಿ, ಹಣ ವಸೂಲಿ ಮಾಡುವ ದುರುz್ದೆÃಶದಿಂದ ಕೂಡಿದೆ ಎಂದು ತಿಳಿಸಿದರು.
ಸಂಘದ ಸಂಘಟನಾ ಕಾರ್ಯದರ್ಶಿ ಜಗದೀಶ್ ಕೋಟೆ ಮಾತನಾಡಿ, ಪ್ರವಾಸಿಗರನ್ನು ಭದ್ರತೆ ಇಲ್ಲದೇ ಕರೆದೊಯ್ಯುವ ಜೀಪ್‌ಗಳಿಗೆ ಕಡಿವಾಣ ಹಾಕುವ ಮೂಲಕ ಗುಣಮಟ್ಟದ ವಾಹನಗಳನ್ನು ಪ್ರವಾಸಿಗರು ಕೊಂಡೊಯ್ಯಲು ಕ್ರಮವಹಿಸಬೇಕು. ದರ್ಗಾದಿಂದ ಮಾಣಿಕ್ಯಧಾರದ ರಸ್ತೆಯ ಪಕ್ಕದಲ್ಲಿ ಪ್ರಪಾತಗಳಿದ್ದು ಕೂಡಲೇ ಸ್ಟೀಲ್ ರೋಡ್ ಬ್ಯಾರಿಯರ್‌ಗಳನ್ನು ಅಳವಡಿಸಬೇಕು ಎಂದರು.
ಸರ್ಕಾರ ಪ್ರತಿ ವರ್ಷ ಪ್ರವಾಸೋದ್ಯಮ ಉತ್ತೇಜನಕ್ಕೆ ಮತ್ತು ರಸ್ತೆ ನಿರ್ವಹಣೆಗೆ ಕೋಟಿಗಟ್ಟಲೇ ಹಣ ಬಿಡುಗಡೆ ಮಾಡುತ್ತಿವೆ. ಇದರಿಂದ ರಸ್ತೆ ನಿರ್ವಹಣೆ ಮಾಡದೇ ಪ್ರವಾಸಿಗರಿಗೆ ತೊಂದರೆಗಳಾಗಿ ಅಪಘಾತ ಗಳು ಹೆಚ್ಚುತ್ತಿರುವ ಪರಿಣಾಮ ಪ್ರವಾಸಿಗರು ಜಿಲ್ಲೆಯ ಪ್ರವಾಸೋದ್ಯಮ ವ್ಯವಸ್ಥೆ ಬಗ್ಗೆ ಕೆಟ್ಟ ಆಲೋಚನೆ ಗಳಿವೆ. ಹಾಗಾಗಿ ಗಿರಿಪ್ರದೇಶದ ರಸ್ತೆಗಳನ್ನು ಅಭಿವೃದ್ದಿಪಡಿಸಿ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಹೇಳಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net