ರಾಜ್ಯದಲ್ಲಿ ಛಾಯಾಗ್ರಹಣ ಅಕಾಡೆಮಿ ಬೇಡಿಕೆಗೆ ಬೆಂಬಲ...

Cartoon
Published on

ಸಮಾನ ಮನಸ್ಕ ಕನ್ನಡಿಗರ ವೇದಿಕೆ ಸಹಮತ

ವಿಜಯವಾಣಿ ಸುದ್ದಿಜಾಲ ಉಡುಪಿ

ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯದಲ್ಲಿ ಇರುವಂತೆ ಕರ್ನಾಟಕ ರಾಜ್ಯದಲ್ಲಿಯೂ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಬೇಕು ಎಂಬ ಬೇಡಿಕೆಗೆ ಸಮಾನ ಮನಸ್ಕ ಕನ್ನಡಿಗರ ವೇದಿಕೆ ಬೆಂಬಲ ವ್ಯಕ್ತಪಡಿಸಿದೆ.

ಈ ವಿಚಾರವಾಗಿ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದು ಸೂಕ್ತವಾಗಿದ್ದು, ಸಂತೋಷದಾಯಕ ಸಂಗತಿಯಾಗಿದೆ ಎಂದು ವೇದಿಕೆ ಅಧ್ಯಕ್ಷ ಶ್ರೀನಿವಾಸ ರಾವ್​ ಕೆ. ತಿಳಿಸಿದ್ದಾರೆ.

ಸರ್ಕಾರ ಸಕಾರಾತ್ಮ ನಿಲುವು ತಾಳಲಿ

ಶ್ರೀನಿವಾಸ ರಾವ್

ಛಾಯಾಗ್ರಹಣ ಅಕಾಡೆಮಿ ಸ್ಥಾಪನೆಯಾದರೆ ಯುವ ಸಮುದಾಯಕ್ಕೂ ಅನುಕೂಲ ಆಗಲಿದೆ. ಪ್ರವಾಸೋದ್ಯಮ ಚಟುವಟಿಕೆಗೂ ಪೂರಕವಾಗಲಿದೆ. ರಾಜ್ಯದಲ್ಲಿ ಸುಮಾರು 4 ಲಕ್ಷ ಛಾಯಾಗ್ರಾಹಕರಿದ್ದಾರೆಂಬ ಮಾಹಿತಿ ನೀಡಲಾಗಿದ್ದು, ಹಿರಿಯರಿಗೆ ಪಿಂಚಣಿ, ವಿಮೆ, ಪ್ರಶಸ್ತಿ ನೀಡಿ ಪ್ರೋತ್ಸಾಹಿಸಬಹುದಾಗಿದೆ. ಅಕಾಡೆಮಿ ಸ್ಥಾಪನೆಯಾದರೆ ಛಾಯಾಗ್ರಹಣವೂ ಸಹ ಶಿಕ್ಷಣದ ಕ್ಷೇತ್ರದಲ್ಲಿ ಇನ್ನೊಂದು ಹೊಸ ಮಾರ್ಗ ತೆರೆದುಕೊಂಡಂತಾಗುತ್ತದೆ. ಸರ್ಕಾರ ಈ ವಿಚಾರವಾಗಿ ಸಕಾರತ್ಮಕ ನಿಲುವು ತಾಳಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net