ಧರ್ಮಗ್ರಂಥಗಳ ಪಾರಾಯಣದಿಂದ ಮೋಕ್ಷ ಪ್ರಾಪ್ತಿ

kashi jan 30 2020
Published on

ಬೆಂಗಳೂರು: ಧರ್ಮ ಗ್ರಂಥಗಳಿಗೆ ಶಾಸ್ತ್ರ ಮಹಾಮಂತ್ರಗಳು ಎಂದು ಕರೆಯಲಾಗಿದೆ. ಹೇಗೆ ಇಷ್ಟದೇವರ ಮಂತ್ರ ಜಪಿಸುವುದರಿಂದ ಸಾಧಕರಿಗೆ ಭೋಗ ಮೋಕ್ಷಗಳು ಸಿಗುವುದೋ ಅದರಂತೆ ಶಾಸ್ತ್ರ ಮಹಾಮಂತ್ರಗಳಾದ ಧರ್ಮಗ್ರಂಥಗಳ ಪಾರಾಯಣದಿಂದ ಭೋಗ ಮೋಕ್ಷಗಳು ದೊರೆಯುತ್ತವೆ ಎಂದು ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ.

ಕಾಶೀ ಮಹಾಪೀಠದಲ್ಲಿ ನಡೆಯುತ್ತಿರುವ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲ ಶತಮಾನೋತ್ಸವದ ಅಂಗವಾಗಿ ಹಮ್ಮಿ ಕೊಂಡಿದ್ದ ಶ್ರೀಸಿದ್ಧಾಂತ ಶಿಖಾಮಣಿ ಅಖಂಡ ಪಾರಾಯಣ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಶ್ರೀಸಿದ್ಧಾಂತ ಶಿಖಾಮಣಿ, ಶ್ರೀಮದ್ಭಾಗವತ, ಶ್ರೀಮದ್ಭಗವದ್ಗೀತಾ, ಶ್ರೀದುರ್ಗಾ ಸಪ್ತಶತಿ, ಶ್ರೀರಾಮಾಯಣ, ಶ್ರೀದೇವಿ ಪುರಾಣ ಮುಂತಾದ ಗ್ರಂಥಗಳನ್ನು ಪಾರಾಯಣ ಮಾಡುವ ಪದ್ಧತಿ ಅನಾದಿಕಾಲದಿಂದಲೂ ಬಂದಿದೆ. ಸಂಸಾರ ಸಾಗರದಿಂದ ಪಾರುಮಾಡುವ ಸುಲಭ ಸಾಧನವೇ ಧರ್ಮ ಗ್ರಂಥಗಳ ಪಾರಾಯಣ ಎಂದು ಶ್ರೀಮದ್ಭಾಗವತದಲ್ಲಿ ಹೇಳಲಾಗಿದೆ. ಧರ್ಮಗ್ರಂಥವನ್ನು ಭಕ್ತಿಯಿಂದ ಪಾರಾಯಣ ಮಾಡಿ ಅದರಿಂದ ಪ್ರಾಪ್ತವಾಗುವ ಪುಣ್ಯದಿಂದ ಭೋಗ ಐಶ್ವರ್ಯಗಳನ್ನು ಹಾಗೂ ಗ್ರಂಥದ ಸ್ವಾಧ್ಯಾಯ ಮಾಡಿ ಅದರ ಅರ್ಥವನ್ನು ತಿಳಿದುಕೊಂಡು ಸದ್ಗತಿಯನ್ನು ಸಹ ಪಡೆದುಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net