ಕೋಟದಲ್ಲಿ ಭಾರತಮಾತೆಗೆ ನಮನ

kota
ಕೋಟ ರಾಷ್ಟ್ರೀಯ ಹೆದ್ದಾರಿ ಅಮೃತೇಶ್ವರಿ ಸರ್ಕಲ್ ಬಳಿ ಕೋಟದ ಜನತೆ ಸಂಸದ ಕೋಟರೊಂದಿಗೆ ಕೈಹಿಡಿದು ಮಾನವ ಸರಪಳಿಯಲ್ಲಿ ಭಾಗವಹಿಸಿದರು.
Published on

ವಿಜಯವಾಣಿ ಸುದ್ದಿಜಾಲ ಕೋಟ

ಕೋಟ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ಪಂಚಾಯಿತಿ ,ಪಟ್ಟಣ ಪಂಚಾಯಿತಿಗಳು, ಸಂಘಸಂಸ್ಥೆಗಳು, ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗ ಹೆದ್ದಾರಿಯಲ್ಲಿ ಕೈ ಕೈ ಹಿಡಿದು ಭಾರತ ಮಾತೆಗೆ ನಮನ ಸಲ್ಲಿಸಿದರು.

ಕೋಟ, ಕೋಟತಟ್ಟು, ಸಾಲಿಗ್ರಾಮ ಪಟ್ಟಣ ಪಂಚಾಯಿತಿ, ಪಾಂಡೇಶ್ವರ, ಐರೋಡಿ, ಕೋಡಿ, ತೆಕ್ಕಟ್ಟೆ ಗ್ರಾಮ ಪಂಚಾಯಿತಿಗಳು, ಕೋಟದ ಲಕ್ಷ್ಮೀ ಸೋಮ ಬಂಗೇರ ಕಾಲೇಜು ಸಹಿತ ವಿವಿಧ ಸಂಘ, ಸಂಸ್ಥೆಗಳು ಭಾಗವಹಿಸಿದ್ದವು.

ಕೋಟ ಗ್ರಾಮ ಪಂಚಾಯಿತಿ ಪಿಡಿಒ ಸುರೇಶ್ ಬಂಗೇರ, ಕಾರ್ಯದರ್ಶಿ ಶೇಖರ್ ಮರವಂತೆ, ಉಪಾಧ್ಯಕ್ಷ ಪಾಂಡು ಪೂಜಾರಿ, ಕೋಟತಟ್ಟು ಗ್ರಾ.ಪಂ ಅಧ್ದಕ್ಷ ಸತೀಶ್ ಕುಂದರ್, ಪಿಡಿಓ ರವೀಂದ್ರ ರಾವ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸಂಸದ ಕೋಟ ಭೇಟಿ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾನವ ಸರಪಳಿಯಲ್ಲಿ ಭಾಗಿಯಾಗುವುದರ ಜತೆಗೆ ಕೋಟ ಆರಕ್ಷಕ ಠಾಣೆಯಲ್ಲಿ ಗಿಡ ನೆಟ್ಟರು. ಬಳಿಕ ಕೋಟ ಬಸ್ ನಿಲ್ದಾಣದ ಬಳಿ ನಡೆದ ಪಂಚವರ್ಣ ಸಂಸ್ಥೆಯ ಮಾನವ ಸರಪಳಿಯಲ್ಲಿ ಭಾಗಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net