ಕವಿತಾಳ: ಪಟ್ಟಣದ ಆರಾಧ್ಯ ದೈವ ತ್ರಯಂಭಕೇಶ್ವರನಿಗೆ ಭಕ್ತರು ಶಿವರಾತ್ರಿ ಅಂಗವಾಗಿ ಬುಧವಾರ ವಿಶೇಷ ಪೂಜೆ ಸಲ್ಲಿಸಿದರು..ತ್ರಯಂಬಕೇಶ್ವರನಿಗೆ ಬೆಳ್ಳಿಯ ಕವಚದಿಂದ ಶೃಂಗರಿಸಲಾಗಿತ್ತು..ಬೆಳಗ್ಗೆಯಿಂದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಕವಿತಾಳ ಸೇರಿದಂತೆ ಹುಸೇನಪೂರ, ಹಣಗಿ, 74 ಕ್ಯಾಂಪ್, ವಟಗಲ್, ಪರಸಪೂರ ಗ್ರಾಮದ ಭಕ್ತರು ದರ್ಶನ ಪಡೆದರು.