ಹೊನ್ನಹುಡಿ ಮಹದೇಶ್ವರ ದೇವಸ್ಥಾನಕ್ಕೆ ಸಾಲೂರುಶ್ರೀ ಭೇಟಿ

25-KGL-5
ಕೊಳ್ಳೇಗಾಲ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ತಾಲೂಕಿನ ಅರೇಪಾಳ್ಯ ಗ್ರಾಮದ ಅರಣ್ಯದಂಚಿನಲ್ಲಿರುವ ಹೊನ್ನಹುಡಿ ಮಹದೇಶ್ವರರ ದೇವಸ್ಥಾನದಲ್ಲಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಪೂಜೆ ಸಲ್ಲಿಸಿದರು.
Published on

ಕೊಳ್ಳೇಗಾಲ : ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ತಾಲೂಕಿನ ಅರೇಪಾಳ್ಯ ಗ್ರಾಮದ ಹೊನ್ನಹುಡಿ ಮಹದೇಶ್ವರರ ದೇವಸ್ಥಾನಕ್ಕೆ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠ ಅದ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಭೇಟಿ ನೀಡಿ ದೇವರಿಗೆ ಮಂಗಳಾರತಿ ಮಾಡುವ ಮೂಲಕ ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಶ್ರೀಗಳು, ಮಹದೇಶ್ವರರನ್ನು ನಂಬಿದರೆ ಎಂದಿಗೂ ಕೈಬಿಡದೆ ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ನೆರವಾಗುತ್ತಾರೆ. ಕಾಡಂಚಿನ ಪ್ರದೇಶದಲ್ಲಿ ಮಹದೇಶ್ವರು ಕಾಲಿಟ್ಟ ಇಲ್ಲಿಯೂ ಸುಂದರ ದೇವಸ್ಥಾನ ನಿರ್ಮಾಣವಾಗಿದೆ. ದೇವಸ್ಥಾನಕ್ಕೆ ಅಕ್ಕಪಕ್ಕದ ಗ್ರಾಮಸ್ಥರಲ್ಲದೆ ದೂರದ ಗ್ರಾಮಗಳಿಂದ ಆಗಮಿಸಿ ಪೂಜಾ ಕೈಂಕರ್ಯಗಳನ್ನು ನಡೆಸುತ್ತಿರುವುದು ಒಳ್ಳೆಯ ಕಾರ್ಯ ಎಂದರು.

ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಕೊಳ್ಳೇಗಾಲದ ಹರ್ಷ ಹೋಟೆಲ್‌ನ ಮಾಲೀಕ ನಟ ರಾಜಪ್ಪ ಮತ್ತು ಹರ್ಷ ಅವರು ಪ್ರಸಾದ ವ್ಯವಸ್ಥೆ ಮತ್ತು ಕಾರು ಚಾಲಕರು ದೇವಸ್ಥಾನದ ಅಲಂಕಾರ, ಮಹದೇಶ್ವರರ ಉತ್ಸವ, ನಂದಿಕಂಬ ಮೆರವಣಿಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

ಮಹದೇಶ್ವರರ ಹುಲಿವಾಹನ ಹಾಗೂ ನಂದಿಕಂಬ ಉತ್ಸವವನ್ನು ಭಕ್ತರು ಕಣ್ತುಂಬಿಕೊಂಡರು. ರಾಜೇಶ್ ತಂಡ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸಾವಿರಾರು ಭಕ್ತರು ಪೂಜೆ ಕೈಂಕರ್ಯ ನಡೆಸಿ, ಪ್ರಸಾದ ಸ್ವೀಕರಿಸಿದರು.

ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಉಪಾದ್ಯಕ್ಷ ತಿಮ್ಮರಾಜೀಪುರ ರಾಜು, ಪ್ರಧಾನ ಕಾರ್ಯದರ್ಶಿ ಕೆಂಪನಪಾಳ್ಯ ಮಹೇಶ, ಎಪಿಎಂಸಿ ಮಾಜಿ ಅಧ್ಯಕ್ಷ ಸೋಮಣ್ಣ, ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು, ಗೀತಾ ಏಜೆನ್ಸಿ ಉಮೇಶ್, ಮುಡಿಗುಂಡದ ವಿಜಯ್ ಕುಮಾರ್, ಕಾರು ಚಾಲಕರು ಸೇರಿದಂತೆ ಸಾವಿರಾರು ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net