

ಕೊಪ್ಪಳ: ನಗರದ ನೇತ್ರಾವತಿ ಹೇರ್ ಡ್ರೆಸ್ಸೆಸ್ 22ನೇ ವಾರ್ಷಿಕೋತ್ಸವ ಅಂಗವಾಗಿ ಶನಿವಾರ 150 ಅಂಧ, ಬುದ್ಧಿಮಾಂದ್ಯ ಮಕ್ಕಳಿಗೆ ಉಚಿತ ಕ್ಷೌರ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಅಂಗಡಿ ಮಾಲೀಕ ಎಚ್.ಗೋಪಾಲ ಮತ್ತವರ ತಂಡ ಪ್ರತಿ ವರ್ಷ ವಾರ್ಷಿಕೋತ್ಸವದಂದು ಉಚಿತ ಕ್ಷೌರ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ವರ್ಷವೂ ಉಚಿತ ಸೇವೆ ಮುಂದುವರೆಸಿದ್ದಾರೆ. ಪ್ರಮುಖ ಅಲಿಖಾನ್ ಹಾಗೂ ಗೋಪಾಲ ತಂಡದ ಆನಂದ, ಶಿವಪ್ಪ ಆನೆಗೊಂದಿ, ಅಶೋಕ್, ಸಂತೋಷ, ಶ್ರೀನಿವಾಸ, ಕಾಳಿಂಗ, ಎಚ್.ಶ್ರೀನಿವಾಸ ಇತರರಿದ್ದರು.