

ಮುಂಬಯಿ: ಕೆಲವು ವರದಿಗಳ ಪ್ರಕಾರ ಸಲ್ಮಾನ್ ಖಾನ್ಗೆ ಡೆಂಘೆ ಜ್ವರ ಶುರುವಾಗಿದೆ. ಬಲ್ಲ ಮೂಲಗಳ ಪ್ರಕಾರ ಕೆಲವು ದಿನಗಳಿಂದ ಸಲ್ಮಾನ್ ಖಾನ್ ಆರೋಗ್ಯ ಸರಿ ಇರಲಿಲ್ಲ.
ಅನಾರೋಗ್ಯದ ಕಾರಣ ಅವರು ಬಿಗ್ಬಾಸ್ನಿಂದ ಸಣ್ಣ ವಿರಾಮವನ್ನು ಪಡೆದಿದ್ದಾರೆ. ಸಲ್ಮಾನ್ ಖಾನ್ ಅನಾರೋಗ್ಯದ ಬಗ್ಗೆ ತಿಳಿದುಕೊಂಡ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಲ್ಲು ಭಾಯ್ ಡೆಂಘೆಯಿಂದ ಬೇಗ ಗುಣಮುಖರಾಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.
ಈಗ ಸಲ್ಲು ಬದಲಾಗಿ ನಿರ್ಮಾಪಕ ಕರಣ್ ಜೋಹರ್ ಬಿಗ್ಬಾಸ್ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ. ಇತ್ತೀಚೆಗಷ್ಟೆ ಸಲ್ಮಾನ್ ಖಾನ್ ಕತ್ರೀನಾ ಕೈಫ್ ಜೊತೆಗೆ ಅಭಿನಯಿಸಿದ 'ಟೈಗರ್ 3' 2023ರ ದೀಪಾವಳಿ ವೇಳೆಗೆ ಬಿಡುಗಡೆ ಆಗಲಿದೆ ಎಂದು ಘೋಷಿಸಿದ್ದರು. (ಏಜೆನ್ಸೀಸ್)