ದೇಹ ತ್ಯಾಗ ಮಾಡಿದ ಭಾಗ್ಯವಂತಿದೇವಿ ಚೋಪ್ರಾ

sallekhana vrat jain community koppal chopra family
Published on

ಕೊಪ್ಪಳ: ನಗರದ ಚೋಪ್ರಾ ಮನೆತನದ ಭಾಗ್ಯವಂತಿದೇವಿ ಚೋಪ್ರಾ (78) ಅವರು ಕಳೆದ 16 ದಿನಗಳ ಹಿಂದೆ ಜೈನ ಧರ್ಮದ ಶ್ರೇಷ್ಠ ಮತ್ತು ಕಠೋರ ಸಲ್ಲೇಖನಾ ವ್ರತ ಸ್ವೀಕರಿಸಿದ್ದು ಶುಕ್ರವಾರ ದೇಹ ತ್ಯಾಗ ಮಾಡಿದರು.

ನಗರದ ಶ್ವೇತಾಂಬರ ಜೈನ ಪರಂಪರೆಯ ಮಾಂಗೀಲಾಲ ಚೋಪ್ರಾ ಪತ್ನಿ ಭಾಗ್ಯವಂತಿ ದೇವಿ ಚೋಪ್ರಾ ಸೆ.11ರ ಮಧ್ಯಾಹ್ನ 3.41ಕ್ಕೆ ಸಲ್ಲೇಖನ ವ್ರತ ಆರಂಭಿಸಿದ್ದರು. ಜೈನ ತತ್ವದ ನಿಯಮಾನುಸಾರ ವ್ರತ ಕೈಗೊಂಡು ಪೂರ್ಣಗೊಳಿಸಿದರು. ಶಾರೀರಿಕ ಅನಾರೋಗ್ಯದಿಂದಾಗಿ ಕೊನೆಯ ಉಸಿರಿನ ತನಕ ಸ್ವಯಂ ಪ್ರೇರಣೆಯಿಂದ ಜೈನ ಸಂತ ಮುನಿವರ್ಯರ ಸನ್ನಿಧಿಯಲ್ಲಿ ಧಮಾರ್ರಾಧನೆಯಲ್ಲಿ ತೊಡಗಿದ್ದರು.

ಇದು ಬದುಕಿನ ಕೊನೆಯ ಘಟ್ಟದ ಕಠೋರ ವ್ರತ. ಮನುಷ್ಯ ಸಂಪೂರ್ಣ ಆಯುಷ್ಯ ಮುಗಿವವರೆಗೆ ವ್ರತದಲ್ಲೇ ಕಳೆಯುವುದಾಗಿದೆ. ಹನಿ ನೀರನ್ನು ಕುಡಿಯುವುದಿಲ್ಲ. ಧರ್ಮ ಆರಾಧನೆಯಲ್ಲಿ ತೊಡಗಿರುತ್ತಾರೆಂದು ಮಹೇಂದ್ರ ಚೋಪ್ರಾ ತಿಳಿಸಿದರು. ವ್ರತ ಅವಧಿಯಲ್ಲಿ ಅನೇಕರು ಚೋಪ್ರಾ ನಿವಾಸಕ್ಕೆ ಭೇಟಿ ನೀಡಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಶುಕ್ರವಾರವೇ ಅಂತಿಮ ವಿಧಿ ವಿಧಾನ ನೆರವೇರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net