

ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ 5 ವರ್ಷದ ಆಡಳಿತ ಮಂಡಳಿಗೆ ಶುಕ್ರವಾರ ಚುನಾವಣೆ ನಡೆಯಿತು. ಶ್ರೀ ದೇವಳದಲ್ಲಿ ಆಡಳಿತ ಮಂಡಳಿಯ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಮಾಜಿ ಅಧ್ಯಕ್ಷ ಐರೋಡಿ ಜಗದೀಶ್ ಕಾರಂತ ನೇತೃತ್ವದ ತಂಡದ ಡಾ.ಕೆ.ಸೀತಾರಾಮ ಕಾರಂತ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗಣೇಶ್ ಮೂರ್ತಿ ನಾವಡ ಕೆ.ಎಸ್., ಕಾರ್ಯದರ್ಶಿಯಾಗಿ ಲಕ್ಷ್ಮಿನಾರಾಯಣ ತುಂಗ, ಕೋಶಾಧಿಕಾರಿಯಾಗಿ ಪರಶುರಾಮ್ ಭಟ್, ಸದಸ್ಯರಾಗಿ ಕೆ.ಅನಂತಪದ್ಮನಾಭ ಐತಾಳ್, ಚಂದ್ರಶೇಖರ ಉಪಾಧ್ಯ, ಪಿ.ಸದಾಶಿವ ಐತಾಳ್, ಎ.ವಿ.ಶ್ರೀಧರ ಕಾರಂತ್, ಎಂ.ಶ್ರೀಧರ ರಾವ್ ಆಯ್ಕೆಯಾಗಿದ್ದಾರೆ, ಮುಖ್ಯ ಚುನಾವಣಾಧಿಕಾರಿಯಾಗಿ ಜಿ.ರಾಮಕೃಷ್ಣ ಐತಾಳ್ ಕಾರ್ಯ ನಿರ್ವಹಿಸಿದರು.