ಸಾಲಿಗ್ರಾಮ ದೇವಳ ಆಡಳಿತ ಮಂಡಳಿಗೆ ಆಯ್ಕೆ

saligrama new
Published on

ಕೋಟ: ಶ್ರೀ ಕ್ಷೇತ್ರ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ 5 ವರ್ಷದ ಆಡಳಿತ ಮಂಡಳಿಗೆ ಭಾನುವಾರ ಚುನಾವಣೆ ನಡೆಯಿತು. ಸಾಲಿಗ್ರಾಮ ಕ್ಷೇತ್ರದಿಂದ ವಕೀಲ ಕೆ.ಅನಂತಪದ್ಮನಾಭ ಐತಾಳ್, ಚಂದ್ರಶೇಖರ ಉಪಾಧ್ಯ, ಪರುಶರಾಮ ಭಟ್, ಲಕ್ಷ್ಮಿನಾರಾಯಣ ತುಂಗ ಹಾಗೂ ಉಡುಪಿ ಜಿಲ್ಲೆಯಿಂದ ಡಾ.ಕೆ.ಎಸ್. ಕಾರಂತ, ದಕ್ಷಿಣ ಕನ್ನಡ ಜಿಲ್ಲೆಯಿಂದ ಸದಾಶಿವ ಐತಾಳ್, ಬೆಂಗಳೂರು ಕಾರ್ಪೋರೇಶನ್‌ನಿಂದ ಎ.ವಿ.ಶ್ರೀಧರ ಕಾರಂತ, ರಾಜ್ಯದ ಇತರೆ ಭಾಗಗಳಿಂದ ಗಣೇಶ್ ಮೂರ್ತಿ ನಾವಡ ಕೆ.ಎಸ್., ಎಂ.ಶ್ರೀಧರ ರಾವ್ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಜಿ.ರಾಮಕೃಷ್ಣ ಐತಾಳ್ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net