ಭೇರ್ಯ ಗ್ರಾಮದಲ್ಲಿ 16ರಂದು ಕರಿಯಮ್ಮ, ದೊಡ್ಡಮ್ಮ ಜಾತ್ರೋತ್ಸವ

IMG_20250413_160001_076
Published on

 ಸಾಲಿಗ್ರಾಮ: ಸುಮಾರು 600 ವರ್ಷಗಳ ಇತಿಹಾಸ ಇರುವ ಶಕ್ತಿ ದೇವತೆ ಶ್ರೀ ಕರಿಯಮ್ಮ, ದೊಡ್ಡಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಏ. 15 ಮತ್ತು 16ರಂದು ಸಮೀಪದ ಭೇರ್ಯ ಗ್ರಾಮದಲ್ಲಿ ವಿಶೇಷ ಪೂಜಾದಿಗಳು ನೆರವೇರಲಿವೆ. ಗ್ರಾಮದಲ್ಲಿ ನೆಲೆಸಿರುವ ಶಕ್ತಿ ದೇವತೆ ಕರಿಯಮ್ಮ ಮತ್ತು ದೊಡ್ಡಮ್ಮ ಜೋಡಿ ದೇವಿಯರ ಪವಾಡಗಳು ಸಾಕಷ್ಟು ಇದ್ದು, ಜಿಲ್ಲೆ, ಹೊರ ಜಿಲ್ಲೆಯ ಭಕ್ತರು ಸನ್ನಿಧಿಗೆ ನಡೆದುಕೊಳ್ಳುವುದು ವಿಶೇಷವಾಗಿದೆ. ಏ. 15ರ ಮಂಗಳವಾರ ರಾತ್ರಿ ತಾಯಿಯ ಸಿಡಿ ಉತ್ಸವ, 16ರಂದು ಜಾತ್ರಾ ಮಹೋತ್ಸವಗಳು ಅದ್ದೂರಿಯಾಗಿ ಸಂಪನ್ನಗೊಳ್ಳಲಿದೆ. ಅರ್ಚಕರು ಕುಮಾರನಾಯಕ ನೇತೃತ್ವದಲ್ಲಿ ಪೂಜಾ ವಿಧಿಗಳು ನೆರವೇರಲಿವೆ. ಹತ್ತಾರು ಗ್ರಾಮಗಳ ವಿವಿಧ ಸಮುದಾಯದ ಮುಖಂಡರು ಸೇರಿ ಸಮಿತಿ ಮಾಡಿಕೊಂಡಿದ್ದು, ಜಾತ್ರಾ ಮಹೋತ್ಸವ ಮತ್ತು ಸಿಡಿ ಉತ್ಸವಗಳನ್ನು ಸಾಮರಸ್ಯದಿಂದ ಮಾಡುವುದು ವಿಶೇಷವಾಗಿದೆ. ಈ ಸಂದರ್ಭ ಮಾತನಾಡಿದ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ನಾಡಗೌಡ ಕುಮಾರಸ್ವಾಮಿ, ದೇವಿಯರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಸಲು ಸಿದ್ಧತೆ ಪೂರ್ಣಗೊಂಡಿದೆ ಎಂದರು. ತಾಯಿಯನ್ನು ನಂಬಿ ತಮ್ಮ ಇಷ್ಟಾರ್ಥ ನೆರವೇರಿಸಿಕೊಳ್ಳಲು ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಸಮಿತಿ ಹಲವು ಸೌಲಭ್ಯಗಳನ್ನು ಭಕ್ತರ ಅನುಕೂಲಕ್ಕಾಗಿ ಕಲ್ಪಿಸಿಕೊಟ್ಟಿದೆ. ಭಕ್ತರು ಸಹಕರಿಸಬೇಕು ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net