ಕೀಟಭಾದೆ ಸಮಸ್ಯೆಗೆ ಪರಿಹಾರವಿದೆ

Published on

ಸಹಾಯಕ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ಸಲಹೆ
ಸಾಲಿಗ್ರಾಮ : ಸಾಲಿಗ್ರಾಮ ವ್ಯಾಪ್ತಿಯಲ್ಲಿ ಭತ್ತದ ಬೆಳೆ ಪ್ರಾರಂಭಿಕ ಹಂತದಲ್ಲಿದ್ದು, ಕೆಲವು ಕೀಟಭಾದೆ ಹಾಗೂ ಪೋಷಕಾಂಶಗಳ ಕೊರತೆ ಎದುರಾಗಿದೆ. ಇದರ ನಿರ್ವಹಣೆ ಕ್ರಮ ವಹಿಸುವಂತೆ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಕೆ.ಜೆ.ಮಲ್ಲಿಕಾರ್ಜುನ ತಿಳಿಸಿದರು.
ಶನಿವಾರ ಸಾಲಿಗ್ರಾಮ ವ್ಯಾಪ್ತಿಯ ರೈತರಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಭತ್ತದ ಬೆಳೆಗೆ ಜಿಂಕ್ ಕೊರತೆ (ಲಘು ಪೋಷಕಾಂಶ)ಯಿಂದ ಹೊಸ ಎಲೆಗಳ ಬುಡ ಭಾಗ ಹಳದಿ ಹಾಗೂ ಕಂದು ಬಣ್ಣಕ್ಕೆ ತಿರುಗುವುದರಿಂದ ಬೆಳವಣಿಗೆ ಕುಂಠಿತವಾಗಿದೆ. ಇದರಿಂದ ತೆಂಡೆ ಒಡೆಯುವುದು ತಡವಾಗಲಿದೆ. ಇದಕ್ಕೆ ಜಿಂಕ್, ಲಘು ಪೋಷಕಾಂಶಗಳನ್ನು ನೀರಿನಲ್ಲಿ ಕರಗಿಸಿ ಸಿಂಪರಣೆ ಮಾಡಬೇಕು ಎಂದು ಹೇಳಿದರು. ಎಲೆ ಸುರುಳಿ ಕೀಟ ಹಾಗೂ ಎಲೆ ತಿನ್ನುವ ಹುಳು ಸಮಸ್ಯೆ ಹೆಚ್ಚಾದರೆ ಕ್ವಿನಾಲ್ ಪಾಸ್ ದ್ರಾವಣವನ್ನು ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು ಎಂದು ಮಾಹಿತಿ ನೀಡಿದರು. ಭತ್ತದ ಜಮೀನಿನಲ್ಲಿ ಬೆಳೆಗಳಲ್ಲಿ ರೋಗ ಭಾದೆ ಕಂಡು ಬಂದರೆ ಅದಕ್ಕೆ ಸೂಕ್ತ ಪರಿಹಾರಗಳಿವೆ. ಕೃಷಿಕರು ನೇರವಾಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಯನ್ನು ಸಂಪರ್ಕಿಸಿ ಎಂದು ಅವರು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net