ವಾಲ್ಮೀಕಿ ನಾಯಕರ ಸಂಘದಿಂದ ಅಭಿನಂದನೆ

11 VALMIKI
Published on
ಸಾಲಿಗ್ರಾಮ - ಪರಿವಾರವನ್ನು ಎಷ್ಟಿಕ್ಕೆ ಸೇರಿಸಿದ್ದು ಮತ್ತು ರಾಜ್ಯದಲ್ಲಿ ಪ್ರಥಮ ಬಾರಿಗೆ ಸರ್ಕಾರದಿಂದ ವಾಲ್ಮೀಕಿ ಜಯಂತಿ ಆಚರಣೆ ಮಾಡಿದ್ದು ಅಂದಿನ ಬಿಜೆಪಿ ಮುಖ್ಯಮಂತ್ರಿ ಗಳಾಗಿದ್ದ ಬಿಎಸ್ ಯಡಿಯೂರಪ್ಪನವರು ಇದನ್ನು ನಾಯಕ ಸಮಾಜದ ಬಂಧುಗಳು ಮರೆಯಬಾರದು ಎಂದು ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಕಂಬ್ರಹಳ್ಳಿ ಸುಬ್ಬಣ್ಣ ಶನಿವಾರ ತಿಳಿಸಿದರು.
ಸಾಲಿಗ್ರಾಮ ವಾಲ್ಮೀಕಿ ನಾಯಕರ ಸಂಘದಿಂದ ಆಯೋಜಿಸಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾಗಿ ನಮ್ಮ ಸಮಾಜಕ್ಕೆ ದೊಡ್ಡ ಹುದ್ದೆ ಕೊಟ್ಟಿದ್ದಾರೆ ಅದೇ ರೀತಿ ಬಿಜೆಪಿ ಪಕ್ಷ ನಾಯಕ ಸಮಾಜದ ಬೆಂಗಾವಲಿಗೆ ನಿಂತಿದೆ ಹಾಗಾಗಿ ಈ ಭಾಗದಲ್ಲಿ ಬಿಜೆಪಿ ಸಂಘಟನೆ ಮಾಡಲು ನಿಮ್ಮೆಲ್ಲರ ಸಹಕಾರ ಬೇಕಿದೆ ಎಂದು ನಿರ್ದೇಶಕರಲ್ಲಿ ಮನವಿ ಮಾಡಿದರು.
 ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೊಸಳ್ಳಿ ವೆಂಕಟೇಶ್ ಮಾತನಾಡಿ ಕೆ ಆರ್ ನಗರ ಪಟ್ಟಣದಲ್ಲಿ ನಿರ್ಮಾಣವಾಗಿರುವ ಮಹರ್ಷಿ ವಾಲ್ಮೀಕಿ ಭವನಕ್ಕೆ ದಿವಂಗತ ಚಿಕ್ಕಮ್ಮದು ಅವರ ಮಾರ್ಗದರ್ಶನದಲ್ಲಿ ಮೊದಲ ದಾನಿಗಳಾಗಿ ಒಂದು ಲಕ್ಷ ಇದ್ದೇವೆ ಆದರೆ ವಾಲ್ಮೀಕಿ ಸಮಾಜ ಕೊಟ್ಟ ಮಾತಿಗೆ ತಪ್ಪಲ್ಲ ಎಂಬಂತೆ ಅಲ್ಲಿಂದ ಇಲ್ಲಿಯವರೆಗೂ ನನ್ನ ರಾಜಕೀಯ ಜೀವನದಲ್ಲಿ ನನಗೆ ಬೆಂಗಾವಲಾಗಿ ನಿಂತಿದೆ ನನ್ನ ಉಸಿರಿರುವವರೆಗೂ ಸಮಾಜವನ್ನು ನಾನು ಮರೆಯುವುದಿಲ್ಲ ಅದೇ ರೀತಿ ಸಾಲಿಗ್ರಾಮದಲ್ಲೂ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನಕ್ಕೆ ನನ್ನ ಶಕ್ತಿ ಮೀರಿ ಆರ್ಥಿಕ ನೆರವು ನೀಡುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ ಸುಬ್ಬಣ್ಣ ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾದ ಮೇಲೆ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಪಕ್ಷಕ್ಕೆ ನಾಯಕರ ಸಮಾಜದ ಒಲವು ಹೆಚ್ಚಾಗಿ ಸಿಗುತಿದೆ. ಅದರಂತೆ ನಮ್ಮ ಪಕ್ಷದ ಹೈಕಮಾಂಡ್ ಮುಖಂಡರು ನಾಯಕ ಸಮಾಜದ ಎಲ್ಲಾ ಮುಖಂಡರನ್ನು ಗೌರವಿತವಾಗಿ ಕಾಣುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಹುದ್ದೆಗಳು ನಾಯಕ ಸಮಾಜಕ್ಕೆ ಬಿಜೆಪಿ ಪಕ್ಷದಲ್ಲಿ ಸಿಗಲಿದೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net