

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘವು ಗುಣಮಟ್ಟದ ಅಕ್ಕಿ ಮಾರಾಟ ಕೈಗೊಂಡಿದೆ. ನಾಫೆಡ್ ಸಂಸ್ಥೆಯಿ0ದ ಖರೀದಿಸಿದ ಗುಣಮಟ್ಟದ ಅಕ್ಕಿಯನ್ನು ಡಿ. 27ರಿಂದ ಪ್ರತಿ ಕೆಜಿಗೆ 34 ರೂಪಾಯಿಯಂತೆ ಪ್ರತಿ ವ್ಯಕ್ತಿಗೆ 10 ಕೆಜಿ ಮಾರಾಟ ಮಾಡಲಾಗುವುದು. ಆಸಕ್ತರು ಶಿವಾಜಿ ವೃತ್ತ ಬಳಿಯ ಹಳೆಯ ಎಪಿಎಂಸಿ ಯಾರ್ಡ್ನಲ್ಲಿರುವ ಸಂಘದ ಕಚೇರಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಅಕ್ಕಿ ಖರೀದಿಸಬಹುದು ಎಂದು ಸಂಘದ ಅಧ್ಯಕ್ಷ ರಾಮಣ್ಣ ಕನಾಜಿ ತಿಳಿಸಿದ್ದಾರೆ.