

ಮಳವಳ್ಳಿ: ದಿನಸಿ ಸಾಮಗ್ರಿ, ನೋಟ್‌ಬುಕ್ ಮತ್ತು ಶಿಕ್ಷಣ ಕಲಿಕಾ ಪರಿಕರಗಳನ್ನು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾರಾಟ ಮಾಡುವ ಮಲ್ಲೇಶ್ ಎ ಟು ಜಡ್ ಮಾರ್ಟ್ ತಾಲೂಕಿನಲ್ಲೇ ಜನಮನ್ನಣೆ ಗಳಿಸಿದೆ.
ಪಟ್ಟಣದ ಮೈಸೂರು ಮುಖ್ಯ ರಸ್ತೆಯಲ್ಲಿರುವ ಮಹಾಶಕ್ತಿ ಪೆಟ್ರೋಲ್ ಬಂಕ್ ಎದುರಿನ ಐದು ಅಂತಸ್ತಿನ ಬೃಹತ್ ವಾಣಿಜ್ಯ ಸಂಕೀರ್ಣದಲ್ಲಿ ಈ ಮಾರ್ಟ್ ಇದ್ದು, ಹತ್ತು ವರ್ಷಗಳಿಂದ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಎಲ್ಲ ವಿಧವಾದ ಗುಣಮಟ್ಟದ ದಿನಸಿ ಮತ್ತು ಸ್ಟೇಷನರಿ ಸಾಮಗ್ರಿಗಳನ್ನು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಕಂಡು ಬರುವ ದೊಡ್ಡ ದೊಡ್ಡ ಶಾಪಿಂಗ್ ಮಾಲ್‌ಗಳ ರೀತಿಯಲ್ಲೇ ಇಲ್ಲಿನ ಐದು ಅಂತಸ್ತಿನ ಮಳಿಗೆಯಲ್ಲಿ ಈ ಮಾರ್ಟ್ ವಿನ್ಯಾಸಗೊಂಡಿದೆ. ಪ್ರತಿ ವಿಭಾಗದಲ್ಲೂ ನಿತ್ಯ ಬಳಕೆ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಲಾಗಿದೆ. ಇಲ್ಲಿಗೆ ಭೇಟಿ ನೀಡುವ ಗ್ರಾಹಕರು ತಮಗಿಷ್ಟವಾದುದನ್ನು ಆಯ್ಕೆ ಮಾಡಿಕೊಂಡು ಶಾಪಿಂಗ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ವಿವಿಧ ಕಂಪನಿಗಳ ದಿನಸಿ ಪದಾರ್ಥಗಳೊಂದಿಗೆ ಎಂ ಕ್ಯೂಬ್ ಎಂಬ ಹೆಸರಿನಲ್ಲಿ ಸ್ವಂತವಾಗಿ ತಯಾರಿಸಿರುವ ಗುಣಮಟ್ಟದ ನೋಟ್ ಬುಕ್‌ಗಳೂ ಸೇರಿದಂತೆ ವಿವಿಧ ಕಂಪನಿಗಳ ನೋಟ್ ಪುಸ್ತಕಗಳು, ಕಚೇರಿ ಬಳಕೆಯ ಸ್ಟೇಷನರಿ ವಸ್ತುಗಳು, ಗಿಫ್ಟ್, ಆಫ್ಟಿಕಲ್ಸ್, ಸಭೆ ಸಮಾರಂಭಗಳಲ್ಲಿ ಬಳಸುವ ವಿವಿಧ ರೀತಿಯ ಹಾರ, ಮೈಸೂರು ಪೇಟ, ಶಾಲು ಹಾಗೂ ಮಕ್ಕಳ ಆಟಿಕೆ ಸಾಮಗ್ರಿಗಳು ಒಂದೇ ಸೂರಿನಡಿ ದೊರೆಯಲಿವೆ.
ಕುಟುಂಬ ಸಮೇತರಾಗಿ ಆಗಮಿಸಿ ಖರೀದಿ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಿಂದಲೂ ಕುಟುಂಬ ಸಮೇತರಾಗಿ ಪಟ್ಟಣದಲ್ಲಿರುವ ಮಾರ್ಟ್‌ಗೆ ಆಗಮಿಸಿ ಖರಿದಿಸುತ್ತಾರೆ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿಕೊಡಬೇಕೆಂಬ ದೃಷ್ಟಿಯಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದಲೇ ಗೃಹಿಣಿಯರು ಕುಟುಂಬ ಸಮೇತರಾಗಿ ಆಗಮಿಸಿ ಯಾವುದೇ ಮುಜುಗರವಿಲ್ಲದೆ ತಮ್ಮ ಆಯ್ಕೆ ಸಾಮಗ್ರಿಗಳನ್ನು ಖರೀದಿಸುತ್ತಾರೆ.
ಬಿಲ್‌ನಲ್ಲಿ ರಿಯಾಯಿತಿ: ಯಾವುದೇ ಕಂಪನಿಯ ವಸ್ತುವಿಗೆ ಇಲ್ಲಿ ರಿಯಾಯಿತಿ ದೊರೆಯಲಿದೆ. ಸಾಮಾನ್ಯವಾಗಿ ಯಾವುದೇ ಮಾಲ್ ಅಥವಾ ಅಂಗಡಿಯಲ್ಲಿ ಯಾವುದೇ ಕಂಪನಿಯ ವಸ್ತುವನ್ನು ಖರೀದಿಸಿದರೆ ತೆರಿಗೆ ಸೇರಿ ಮುದ್ರಣವಾಗಿರುವ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಆದರಿಲ್ಲಿ ಲಾಭಾಂಶ ನಿರೀಕ್ಷೆಯನ್ನು ಗೌಣವಾಗಿಸಿ ಗ್ರಾಹಕರ ಗಮನ ಸೆಳೆಯುವ ಸಲುವಾಗಿ ಖರೀದಿಸುವ ಪ್ರತಿ ವಸ್ತುವಿನ ಮುದ್ರಿತ ಬೆಲೆ ಮೇಲೆ ರಿಯಾಯಿ ನೀಡಲಾಗುತ್ತದೆ.
ಬಿಲ್ಲಿಂಗ್ ವ್ಯವಸ್ಥೆಯನ್ನು ಕಂಪ್ಯೂಟರೀಕರಣಗೊಳಿಸಲಾಗಿದ್ದು, ಪ್ರತಿ ವಸ್ತುವಿನ ಖರೀದಿಯಲ್ಲಿ ರಿಯಾಯಿತಿ ನೀಡಿರುವ ಬಗ್ಗೆ ಬಿಲ್‌ನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಇಲ್ಲಿನ ಪಾರದರ್ಶಕ ಹಾಗೂ ಗುಣಮಟ್ಟದ ಮಾರಾಟ ವ್ಯವಸ್ಥೆಯನ್ನು ಮನಗಂಡಿರುವ ಗ್ರಾಹಕರು ಮಾರ್ಟ್‌ನಲ್ಲಿ ಖರೀದಿಸಲು ಮುಗಿಬೀಳುವ ದೃಶ್ಯ ಕಂಡು ಬರುತ್ತದೆ.
ಹಸಿರು ಪಟಾಕಿ ಸ್ಟಾಲ್: ದೀಪಾವಳಿ ಸಂದರ್ಭದಲ್ಲಿ ತಾಲೂಕಿನ ಜನತೆಗಾಗಿ ಮಾರ್ಟ್ ವತಿಯಿಂದ ಹಸಿರು ಪಟಾಕಿ ಮಾರಾಟ ಮಳಿಗೆಯನ್ನು ಪಟ್ಟಣದಲ್ಲಿ ಪ್ರತ್ಯೇಕವಾಗಿ ತೆರೆದು ಮಾರಾಟ ಮಾಡಲಾಗುತ್ತದೆ. ಗ್ರಾಹಕರ ಅನುಕೂಲಕ್ಕಾಗಿ ಪ್ರತಿ ವರ್ಷ ಪಟಾಕಿ ಮಾರಾಟ ಮಳಿಗೆಯನ್ನು ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಖಾಲಿ ನಿವೇಶನದಲ್ಲಿ ತೆರೆಯುವ ಮೂಲಕ ರಿಯಾಯಿತಿ ದರದಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಹತ್ತು ವರ್ಷಗಳಿಂದ ಉತ್ತಮ ಸೇವೆ ನೀಡಲಾಗುತ್ತಿದ್ದು, ಗ್ರಾಹಕರು ಸಂತೃಪ್ತಿಯಿಂದ ವಸ್ತು ಖರೀದಿಸಲು ನಮ್ಮ ಸಂಸ್ಥೆಯಲ್ಲಿ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಲಾಭಕ್ಕೆ ಹೆಚ್ಚು ಒತ್ತು ಕೊಡದೆ ಮಾರ್ಟ್‌ನಲ್ಲಿ ಖರೀಸುವ ಪ್ರತಿ ವಸ್ತುವಿಗೂ ರಿಯಾಯಿತಿ ನೀಡಲಾಗುತ್ತದೆ. ಇದರ ಸದುಪಯೋಗವನ್ನು ತಾಲೂಕಿನ ಜನತೆ ಪಡೆದುಕೊಳ್ಳಬೇಕು.
ಮಲ್ಲೇಶ್ ಮಾಲೀಕ, ಎ ಟು ಜಡ್ ಮಾರ್ಟ್