

ಶಿವಮೊಗ್ಗ: ಸೊರಬ ತಾಲೂಕಿನ ಆನವಟ್ಟಿ ಪಟ್ಟಣದ ತಿಮ್ಲಾಪುರ ಗುಡ್ಡದ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು, 980 ಗ್ರಾಂ ಒಣ ಗಾಂಜಾ, 600 ರೂ. ನಗದು ಜಪ್ತಿ ಮಾಡಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರದ ಸುಹೇಲ್ ಮೆಹೆಬೂಬ್ ಅಲಿ ಮುಲ್ಲನ್ನವರ್(27) ಮತ್ತು ತಿಳುವಳ್ಳಿ ಗ್ರಾಮದ ಗೌಸ್ ಮೊಹಿದ್ದೀನ್‌ಶಾ (26) ಬಂಧಿತರು.
ಖಚಿತ ಮಾಹಿತಿ ಮೇರೆಗೆ ಆನವಟ್ಟಿ ಪಿಎಸ್‌ಐ ರಾಜುರೆಡ್ಡಿ ಬೆನ್ನೂರು ನೇತೃತ್ವದ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ. 40 ಸಾವಿರ ರೂ.ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.