ಗಾಂಜಾ ಮಾರಾಟ, ನಾಲ್ವರ ಬಂಧನ

ganja case in cen stations limits
ಶುಗರ್ ಫ್ಯಾಕ್ಟರಿ ಜಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದರು.
Published on

ಶಿವಮೊಗ್ಗ: ನಗರದ ಮಲವಗೊಪ್ಪದ ಶುಗರ್ ಫ್ಯಾಕ್ಟರಿ ಜಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದು 2.25 ಲಕ್ಷ ರೂ. ಮೌಲ್ಯದ ಒಣ ಗಾಂಜಾ ಜಪ್ತಿ ಮಾಡಿದ್ದಾರೆ.

ಭದ್ರಾವತಿ ಮೋಮಿನ್ ಮೊಹಲ್ಲಾ ಅನ್ವರ್ ಕಾಲನಿಯ ಸುಹೇಲ್ ಖಾನ್ ಅಲಿಯಾಸ್ ಪಿನ್ನಿ (20) ಮೊಹಮ್ಮದ್ ಗೌಸ್ ಅಲಿಯಾಸ್ ಗುಂಡ (23), ಖಾಜಿ ಮೊಹಲ್ಲಾ ಕೋಟೆ ಏರಿಯಾದ ಖಲೀಲ್ ಅಹಮದ್ ಅಲಿಯಾಸ್ ಕಾಲು (25) ಮತ್ತು ಎಕಿನ್ಸಾ ಕಾಲನಿಯ ಸೈಯದ್ ಹಸೈನ್ ಅಲಿಯಾಸ್ ಜಂಗ್ಲಿ (23) ಬಂಧಿತರು.
ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ಎಂ.ಎಸ್.ದೀಪಕ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಧರ್ಮಾನಾಯ್ಕ್, ಡಿ.ಆರ್.ಚಂದ್ರಶೇಖರ್, ಕರಿಬಸಪ್ಪ, ಫಿರ್ದೋಸ್ ಅಹಮ್ಮದ್, ಬಿ.ರವಿ, ಡಿ.ಎನ್.ಚಿದಂಬರ್ ಹಾಗೂ ಚಾಲಕ ಪ್ರಕಾಶನಾಯ್ಕ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ 4.470 ಕೆಜಿ ಒಣ ಗಾಂಜಾ ಜಪ್ತಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net