ಗಾಂಜಾ ಮಾರಾಟ, ನಾಲ್ವರ ಬಂಧನ

H8 Ganja 1
Published on

ಹುಬ್ಬಳ್ಳಿ: ಧಾರವಾಡದ ರಾಮನಗರದ ವನಿತಾ ಸೇವಾ ಸಮಾಜದ ಬಳಿ ಭಾನುವಾರ ಗಾಂಜಾ ಮಾರಾಟಕ್ಕೆ ಮುಂದಾಗಿದ್ದ ನಾಲ್ವರನ್ನು ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಬಂಧಿಸಿ, 20 ಸಾವಿರ ರೂ. ಮೌಲ್ಯದ ಗಾಂಜಾ, ಆಟೋ, 4 ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ಹೊಸ ಯಲ್ಲಾಪುರ ನಿವಾಸಿ ನಿಹಾಲ ವಿಠ್ಠಲ ಲಾಂಡ (20), ಕಲಘಟಗಿಯ ಸುಭಾಸ ಹೊಂಬಣ್ಣ ಫಿರೋಜಿ (38), ತಪೋವನದ ಅಭಿಷೇಕ ಹಿರೇಮಠ (24) ಹಾಗೂ ರಾಮನಗರದ ಅಭಿಷೇಕ ಉಲ್ಲಾಳ (20) ಬಂಧಿತರು.

ಗಾಂಜಾ ಮಾರಾಟ ಮಾಡಲೆಂದು ಮಧ್ಯಾಹ್ನ ಆಟೋದಲ್ಲಿ ಹೊರಟಿದ್ದರು. ಖಚಿತ ಮಾಹಿತಿ ಮೇರೆಗೆ ಐಎಸ್​ಡಿ ತಂಡ ದಾಳಿ ನಡೆಸಿದೆ. ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಐಎಸ್​ಡಿ ಹು-ಧಾ ಘಟಕದ ಪೊಲೀಸ್ ನಿರೀಕ್ಷಕ ಶ್ರೀಶೈಲ ಬ್ಯಾಕೋಡ, ಸಿಬ್ಬಂದಿ ಶ್ರೀನಿವಾಸ ಹೊಸಮನಿ, ಎ.ಎ. ಮಿರ್ಜಿ, ವಿ.ಬಿ. ಮಾಯಣ್ಣವರ, ಜಯದೇವಗೌಡ ಪಾಟೀಲ, ಅರುಣ ಖಾನಾಪುರ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net