ಕಲಬೆರಕೆ ತುಪ್ಪ ಮಾರಾಟ-ಒಬ್ಬ ವಶಕ್ಕೆ

arrest
Published on

ಕುಮಟಾ: ಪಟ್ಟಣದ ಸಿದ್ದನಬಾವಿಯಲ್ಲಿ ಕಲಬೆರಕೆ ತುಪ್ಪ ಮಾರಾಟ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಆಹಾರ ಸುರಕ್ಷತಾ ವಿಭಾಗದ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.

ಯಾವುದೇ ಲೇಬಲ್ ಇಲ್ಲದ ಡಬ್ಬಗಳಲ್ಲಿ ತುಪ್ಪ ಮಾರಾಟ ಮಾಡುತ್ತಿದ್ದ ಶಂಕರಪ್ಪ ಬಳ್ಳಾರಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಆಹಾರ ಸುಕರ‌್ಷತಾ ಅಧಿಕಾರಿ ಅರುಣ ಕಾಶಿ ಭಟ್ ಅವರು ಕಲಬೆರಕೆ ಎನ್ನಲಾದ ತುಪ್ಪದ ಡಬ್ಬಿಗಳನ್ನು ಪರಿಶೀಲಿಸಿದ್ದು ಬೆಳಗಾವಿಯ ಪ್ರಯೋಗಾಲಕ್ಕೆ ಕಳುಹಿಸಿದ್ದಾರೆ. ಪ್ರಯೋಗಾಲಯದ ವರದಿ ಬಳಿಕವೇ ಘಟನೆಯ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net