

ಬ್ರಹ್ಮಾವರ: ನೀಲಾವರ ಗ್ರಾಮ ಪಂಚಾಯಿತಿಯಲ್ಲಿ ಯೂನಿಯನ್ ಬ್ಯಾಂಕ್ ವತಿಯಿಂದ ಸಂಜೀವಿನಿ ಸದಸ್ಯೆಯರಿಗೆ ಸಾಲಮೇಳ, ಕೃತಕ ಆಭರಣ ತರಬೇತಿ ರಾಜ್ಯಮಟ್ಟದ ತರಬೇತುದಾರ ರಶ್ಮಿ ಭಟ್ ಕುಮುಟಾ ಅವರಿಂದ ಗುರುವಾರ ಜರುಗಿತು.
ಯೂನಿಯನ್ ಬ್ಯಾಂಕ್‌ನ ಧನಂಜಯ್, ನೀಲಾವರ ಗ್ರಾಪಂ ಅಧ್ಯಕ್ಷೆ ಕೆ.ಬೇಬಿ, ಉಪಾಧ್ಯಕ್ಷ ರಮೇಶ್ ಪೂಜಾರಿ, ಆರೂರು ಗ್ರಾಪಂ ಅಧ್ಯಕ್ಷ ಗುರುರಾಜ್ ರಾವ್, ಪಿಡಿಒ ಗೀತಾ ಬಾಳಿಗ, ಆರೂರು ಪಿಡಿಒ ಪ್ರಮೀತಾ, ರಘುರಾಮ ಮರಕಾಲ, ಆರ್ಥಿಕ ಸಾಕ್ಷರತಾ ಕಾರ್ಯಕ್ರಮದ ಅರ್ಪಿತಾ, ಮೀರಾ, ಸಂಜೀವಿನಿ ಒಕ್ಕೂಟ ಎಂಬಿಕೆ ನಾಗರತ್ನ, ಎಲ್‌ಸಿಆರ್‌ಪಿ ಕೃಷಿ, ಪಶು ಸಖಿ, ಸಂಜೀವಿನಿ ಸದಸ್ಯರು ಉಪಸ್ಥಿತರಿದ್ದರು. ಗ್ರಾಪಂ ಶ್ರೀ ಮೂಕಾಂಬಿಕಾ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಆಶಾಲತಾ ಮಕ್ಕಿತ್ತಾಯ ಸ್ವಾಗತಿಸಿದರು. ನಾಗರತ್ನ ಕಾರ್ಯಕ್ರಮ ನಿರೂಪಿಸಿದರು. ಯೂನಿಯನ್ ಬ್ಯಾಂಕ್ ರಮೇಶ್ ಜಿ. ವಂದಿಸಿದರು.